ಬೈಕ್ ಮೇಲಿದ್ದ ಯುವಕನ ರುಂಡ ಕತ್ತರಿಸಿ ಕಗ್ಗೊಲೆ

(ನ್ಯೂಸ್ ಕಡಬ) newskadaba.com ಕಲಬುರ್ಗಿ. ಆ,31:  ಬೈಕ್ ಮೇಲೆ ಕೂತಿದ್ದ ಯುವಕನನ್ನು ಹಿಂದಿನಿಂದ ಬಂದು ರುಂಡ ಕತ್ತರಿಸಿ ದುಷ್ಕರ್ಮಿಗಳು ಕಗ್ಗೊಲೆ ಮಾಡುವ ಮೂಲಕ ಕಲಬುರ್ಗಿ ಅಫಜಲಪುರ ತಾಲೂಕಿನ ಸಂಗಾಪೂರ ಗ್ರಾಮದಲ್ಲಿ ನಡೆದಿದೆ. ಭೀಮಾ ತೀರದಲ್ಲಿ ಮತ್ತೆ ನೆತ್ತರು ಹರಿದಿದ್ದು, ಬಾಬು ಮಲ್ಲೇಶಪ್ಪ ಕೋಬಾಳ್ (32) ಹತ್ಯೆಯಾದ ಯುವಕ.

 

 

ಅದೇ ಗ್ರಾಮದ ಪ್ರಭು ಕಾಂಬಳೆ ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ. ಬೈಕ್ ಮೇಲೆ ಕುಳಿತಿದ್ದಾಗ ಪ್ರಭು ಕಾಂಬಳೆ ಕೊಡಲಿಯಿಂದ ಬಾಬು ಕೋಬಾಳನ ರುಂಡ ಕಡಿದಿದ್ದಾನೆ ಎಂದು ಆರೋಪಿಸಲಾಗಿದೆ. ಸುಮಾರು 9 ವರ್ಷಗಳ ಹಿಂದೆ ನಡೆದಿದ್ದ ಕೊಲೆಗೆ ಪ್ರತಿಕಾರ ತೀರಿಸಿಕೊಳ್ಳಲು ಬಾಬು ಕೋಬಾಳನ ಹತ್ಯೆ ಮಾಡಲಾಗಿದೆ ಎಂದು ಶಂಕಿಸಲಾಗಿದ್ದು, ದೇವಲಗಾಣಗಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ಆರಂಭಿಸಿರುವ ಪೊಲೀಸರು ಪ್ರಭು ಕಾಂಬಳೆಗಾಗಿ ಬಲೆ ಬೀಸಿದ್ದಾರೆ.

Also Read  ಮನೆಗೆ ಬೆಂಕಿ ➤ ಒಂದೇ ಕುಟುಂಬದ ಐವರು ಸಜೀವ ದಹನ

 

error: Content is protected !!
Scroll to Top