(ನ್ಯೂಸ್ ಕಡಬ) newskadaba.com ಬೆಂಗಳೂರು, ಆ. 31. ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದ ನಿರ್ದೇಶನದಂತೆ ಅನ್ ಲಾಕ್ 4.0 ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಈ ಮಾರ್ಗಸೂಚಿಯಂತೆ ಸೆಪ್ಟೆಂಬರ್ 30ರವರೆಗೂ ಶಾಲಾ-ಕಾಲೇಜುಗಳ ಪುನರಾರಂಭ ಇಲ್ಲ. ಸೆಪ್ಟೆಂಬರ್ 7ರಿಂದ ಮೆಟ್ರೋ ಸಂಚಾರಕ್ಕೆ ಗ್ರೀನ್ ಸಿಗ್ನಲ್ ನೀಡಿದೆ.
ಈ ಕುರಿತಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿಎಂ ವಿಜಯ್ ಭಾಸ್ಕರ್ ಅನ್ ಲಾಕ್ 4.0 ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದ್ದು, ಸೆಪ್ಟೆಂಬರ್ 30ರವರೆಗೆ ಶಾಲಾ ಕಾಲೇಜುಗಳ ಆರಂಭಕ್ಕೆ ಅವಕಾಶ ನೀಡಿಲ್ಲ. ಆನ್ ಲೈಕ್ ಶಿಕ್ಷಣ ಮುಂದುವರಿಕೆಗೆ ಅವಕಾಶ ನೀಡಲಾಗಿದೆ. ಸೆಪ್ಟೆಂಬರ್ 7ರಿಂದ ಮೆಟ್ರೋ ರೈಲು ಸಂಚಾರ ಕೂಡಾ ಆರಂಭವಾಗಲಿದೆ. ಅನ್ ಲಾಕ್ 4.0 ರಾಜ್ಯ ಸರ್ಕಾದ ಮಾರ್ಗಸೂಚಿಯಂತೆ ಥಿಯೇಟರ್, ಸ್ವಿಮ್ಮಿಂಗ್ ಪೂಲ್ ಗೆ ಅನುಮತಿ ನೀಡಿಲ್ಲ. ಮಲ್ಟಿಫ್ಲೆಕ್ಸ್, ಮನರಂಜನಾ ಪಾರ್ಕ್ ಗಳು ಕೂಡ ಬಂದ್ ಆಗಿರಲಿವೆ. ಸೆಪ್ಟೆಂಬರ್ 30ರವರೆಗೆ ಯಾವುದೂ ತೆರೆಯದಂತೆ ಮಾರ್ಗಸೂಚಿಯಲ್ಲಿ ನಿರ್ಬಂಧ ವಿಧಿಸಲಾಗಿದೆ.