ಭಾರತದ ಮೊದಲ ಮಹಿಳಾ ಹೃದ್ರೋಗ ತಜ್ಞೆ ಕೊರೊನಾ ಸೋಂಕಿಗೆ ಮೃತ್ಯು

(ನ್ಯೂಸ್ ಕಡಬ) newskadaba.com ಹೊಸದಿಲ್ಲಿ,. ಆ,31:  ದೇಶದಲ್ಲಿ ಕೊರೊನಾ ವೈರಸ್ ಅಬ್ಬರ ಮುಂದುವರೆದಿದ್ದು, ದೇಶದ ಮೊದಲ ಮಹಿಳಾ ಹೃದ್ರೋಗ ತಜ್ಞೆ ಡಾ. ಎಸ್. ಪದ್ಮಾವತಿ (103) ಅವರು ಕೊರೊನಾ ವೈರಸ್ ಗೆ ಬಲಿಯಾಗಿದ್ದಾರೆ. ಎಸ್.ಪದ್ಮಾವತಿ ಅವರಿಗೆ ಕೊರೊನಾ ವೈರಸ್ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

 

 

ಹನ್ನೊಂದು ದಿನಗಳ ಹಿಂದೆ ಕೋವಿಡ್-19 ಸೋಂಕು ಕಂಡುಬಂದ ಇವರನ್ನು ನ್ಯಾಷನಲ್ ಹಾರ್ಟ್ ಇನ್‌ಸ್ಟಿಟ್ಯೂಟ್ (ಎನ್‌ಎಚ್‌ಐ)ಗೆ ದಾಖಲಿಸಲಾಗಿತ್ತು. 1981ರಲ್ಲಿ ಈ ಸಂಸ್ಥೆಯನ್ನು ಸ್ವತಃ ಇವರೇ ಅರಂಭಿಸಿದ್ದರು. “ಆಮ್ಲಜನಕ ಬೆಂಬಲ ವ್ಯವಸ್ಥೆಯಲ್ಲಿದ್ದರೂ ಶನಿವಾರ ಮುಂಜಾನೆವರೆಗೂ ಅವರ ಆರೋಗ್ಯ ಸ್ಥಿರವಾಗಿತ್ತು. ರವಿವಾರ ರಾತ್ರಿ ಅವರು ಮೃತಪಟ್ಟರು.  1917 ರಲ್ಲಿ ಬರ್ಮಾದಲ್ಲಿ ಜನಿಸಿದ್ದ ಪದ್ಮಾವತಿ ಅವರು 1942 ರಲ್ಲಿ ಭಾರತಕ್ಕೆ ವಲಸೆ ಬಂದಿದ್ದರು. ಅವರ ಸೇವೆ ಪರಿಗಣಿಸಿ 1967 ರಲ್ಲಿ ಪದ್ಮಭೂಷಣ, 1992 ರಲ್ಲಿ ಪದ್ಮವಿಭೂಷಣ ನೀಡಲಾಗಿತ್ತು.

Also Read  ತುಳುಭವನದ ಆವರಣಗೋಡೆ ಕಾಮಗಾರಿಗೆ ಶಂಕುಸ್ಥಾಪನೆ

 

 

error: Content is protected !!
Scroll to Top