ಹೆತ್ತವ್ವನ ಮೃತದೇಹವನ್ನು ಪುಟ್ ಪಾತ್ ನಲ್ಲಿ ಬಿಟ್ಟುಹೋದ ಪಾಪಿ ಮಗ..!

(ನ್ಯೂಸ್ ಕಡಬ) newskadaba.com ಹೈದ್ರಾಬಾದ್, ಆ. 31. ವೃದ್ಧ ತಾಯಿಯ ಮೃತದೇಹವನ್ನು ಮಗನೊಬ್ಬ ಪುಟ್ ಪಾತ್ ನಲ್ಲಿಯೇ ಬಿಟ್ಟು ಹೋದ ಘಟನೆ ಇಲ್ಲಿನ ಬಂಜಾರ ಹಿಲ್ ಪ್ರದೇಶದಲ್ಲಿ ನಡೆದಿದೆ.

ಈ ಮಹಿಳೆ ಜ್ವರದಿಂದಾಗಿ ಮೃತಪಟ್ಟಿದ್ದು, ಬ್ಲಾಂಕೆಟ್ ವೊಂದರಲ್ಲಿ ಮೃತದೇಹವನ್ನು ಸುತ್ತಿದ ಮಗ  ಪುಟ್ ಪಾತ್ ನಲ್ಲಿಯೇ ಬಿಟ್ಟು ಪರಾರಿಯಾಗಿದ್ದಾನೆ. ಇದನ್ನು ನೋಡಿದ ಸ್ಥಳೀಯರು ಪೊಲೀಸರಿಗೆ ಸುದ್ದಿ ತಿಳಿಸಿದ್ದು, ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಮೃತದೇಹವನ್ನು ವಶಕ್ಕೆ ತೆಗೆದುಕೊಂಡಿದ್ದಾಗಿ ತಿಳಿಸಿದ್ದಾರೆ. ಅಪಾರ್ಟ್ ಮೆಂಟ್ ವೊಂದರ ಕಾಂಪ್ಲೆಕ್ಸ್ ನಲ್ಲಿ ವಾಚ್ ಮನ್ ಆಗಿದ್ದಈತನ ಜೊತೆ ಆಕೆ ವಾಸಿಸುತ್ತಿದ್ದು, ತಾಯಿಯನ್ನು  ಭಿಕ್ಷೆ ಬೇಡಲು ಬಳಸುತ್ತಿದ್ದನು ಎಂದು ವಿಚಾರಣೆಯ ವೇಳೆ ಬಾಯಿ ಬಿಟ್ಟಿದ್ದಾನೆ. ನಾಲ್ಕು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ವೃದ್ಧ ಮಹಿಳೆ ಮೃತಪಟ್ಟಿದ್ದರು. ನಂತರ ಆಕೆಯ ಅಂತ್ಯಸಂಸ್ಕಾರ ಮಾಡಲು ಹಣ ಇಲ್ಲದ ಕಾರಣ ಬ್ಲಾಂಕೆಟ್ ನಲ್ಲಿ ಸುತ್ತಿ ಪುಟ್ ಪಾತ್ ನಲ್ಲಿ ಮೃತದೇಹ ಬಿಟ್ಟು ಪರಾರಿಯಾಗಿದ್ದಾಗಿ ಮಗ ವಿಚಾರಣೆ ವೇಳೆಯಲ್ಲಿ ತಿಳಿಸಿದ್ದಾರೆ.

Also Read  ಮಂಗಳೂರು: ಮತಾಂತರಕ್ಕೆ ಯತ್ನಿಸಿ ನಾಲ್ವರ ಸಾವಿಗೆ ಕಾರಣಳಾದ ಮಹಿಳೆ ಅಂದರ್..!

error: Content is protected !!
Scroll to Top