ಮುಲ್ಕಿ : ಮಾನಸಿಕ ಖಿನ್ನತೆ, ಬಾವಿಗೆ ಹಾರಿ ಮಹಿಳೆ ಆತ್ಮಹತ್ಯೆ



(ನ್ಯೂಸ್ ಕಡಬ) newskadaba.com ಮುಲ್ಕಿ. ಆ,31: ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಮಹಿಳೆಯೊಬ್ಬರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮುಲ್ಕಿ ಸಮೀಪದ ಕೊಲಕಾಡಿ ಎಂಬಲ್ಲಿ ನಡೆದಿದೆ. ಕೊಲಕಾಡಿ ನಿವಾಸಿ ರತ್ನಾಕರ್ ಆಚಾರ್ಯ ಎಂಬುವವರ ಪತ್ನಿ ಶಶಿ ಆರ್ ಆಚಾರ್ಯ (55) ಎಂಬುವವರು ಮೃತ ಮಹಿಳೆಯಾಗಿದ್ದಾರೆ.





 

 

 

ಭಾನುವಾರ ಬೆಳಗ್ಗೆಯಿಂದ ನಾಪತ್ತೆಯಾಗಿದ್ದ ಮಹಿಳೆಯನ್ನು ಸ್ಥಳೀಯರು ಹುಡುಕಾಟ ನಡೆಸಿದಾಗ ಅವರ ಮೃತ ದೇಹ ಬಾವಿಯಲ್ಲಿ ಪತ್ತೆಯಾಗಿದೆ. ಆಪದ್ಬಾಂಧವ ಆಸಿಫ್ ನೇತೃತ್ವದ ಕಾರ್ನಾಡು ಮೈಮುನಾ ಫೌಂಡೇಶನ್ ಸಿಬ್ಬಂದಿ ಮುಸ್ತಕ್ ಮತ್ತು ದಾವೂದ್ ಎಂಬುವವರು ಬಾವಿಯಿಂದ ಮೃತ ದೇಹವನ್ನು ಹೊರ ತೆಗೆದಿದ್ದಾರೆ. ಮುಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






 

error: Content is protected !!
Scroll to Top