ನೇತ್ರಾವತಿ ನದಿಯಲ್ಲಿ ಮುಳುಗುವ ಸ್ಥಿತಿಯಲ್ಲಿದ್ದ ವ್ಯಕ್ತಿ ➤ ಪ್ರವಾಹರಕ್ಷಣಾ ತಂಡದವರಿಂದ ಮುಳುಗುತ್ತಿದ್ದ ಅಸಾಮಿಯ ರಕ್ಷಣೆ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ. ಆ,30:  ಇಲ್ಲೋಬ್ಬ ಅಸಾಮಿ ಅಧಿಕಾರಿಗಳ ಮಾತು ದಿಕ್ಕರಿಸಿ ಉಪ್ಪಿನಂಗಡಿ ನೇತ್ರಾವತಿ ನದಿಯಲ್ಲಿ ಮುಳುಗುವ ಸ್ಥಿತಿಯಲ್ಲಿದ್ದ. ಆದ್ರೆ ಪುತ್ತೂರು ತಹಶೀಲ್ದಾರ್ ನೇತೃತ್ವದ ಪ್ರವಾಹರಕ್ಷಣಾ ತಂಡದವರ ಸಮಯ ಪ್ರಜ್ಞೆಯಿಂದ ಸಾವಿನ ದವಡೆಯಿಂದ ಪಾರಾಗಿದ್ದಾನೆ.

ಮದ್ಯಾಹ್ನ ಸದಾನಂದ ಶಟ್ಟಿಮೂರೂಗೊಳಿ ನಿವಾಸಿ ಎಂಬ ಹೆಸರಿನ ವ್ಯಕ್ತಿಯೊಬ್ಬ ಮೈಮೇಲೆ ವಸ್ತ್ರಧರಿಸದೆ ಬರ್ಬುಂಡ ಚಡ್ಡಿ ಧರಿಸಿ ದೇವಾಲಯದ ಸುತ್ತ ಮುತ್ತ ತಿರುಗಾಡುತ್ತಿದ್ದು ಈ ವೇಳೆಗೆ ಸ್ಥಾನಘಟ್ಟದ ಬಳಿ ನೀರಿಗೆ ಇಳಿದಿರುತ್ತಾರೆ ಈ ವೇಳೆಗೆ ಅಲ್ಲಿ ಕರ್ತವ್ಯದಲ್ಲಿದ್ದ ಪ್ರವಾಹರಕ್ಷಣಾ ಗೃಹರಕ್ಷಕರು ಹಾಗೂ ಈಜುಗಾರರು ಈ ವೇಳೆಗೆ ನೀರಿಗೆ ತೆರಳಬೇಡಿ ಅಪಾಯ ಇದೆ ಎಂದು ಹೇಳಿದರು, ಅವರ ಮಾತು ಧಿಕ್ಕರಿಸಿ ನೇತ್ರಾವತಿ ನದಿ ನೀರಿನಲ್ಲಿ ಮುಂದಕ್ಕೆ ಮುಂದಕ್ಕೆ ಸಾಗುತ್ತಾ ನದಿ ನೀರಿನ ಸೆಳತಕ್ಕೆ ಸಿಲುಕಿಕೊಂಡು ಮುಳುಗುತ್ತಿದ್ದ. ಈ ವೇಳೆಗೆ ಸ್ಥಳದಲ್ಲಿ ಮುಕ್ಕಾಂ ಇದ್ದ ಪುತ್ತೂರು ತಹಶೀಲ್ದಾರ್ ನೇತೃತ್ವದ ಗೃಹರಕ್ಷಕದಳದ ಪ್ರವಾಹರಕ್ಷಣಾ ತಂಡ ಹಾಗೂ ತಾಲೂಕು ಆಗಳಿತದ ಈಜುಗಾರರು ಗೃಹರಕ್ಷಕದಳದ ದೋಣಿಯಲ್ಲಿ ನದಿ ಮದ್ಯಕ್ಕೆ ತೆರಳಿ ಮುಳುಗುತ್ತಿದ್ದ ವ್ಯಕ್ತಿಗೆ ರಕ್ಷಣೆ ಗೆ ದೋಣಿಯ ಹುಟ್ಟು ನೀಡಿ ಹುಟ್ಟುಮುಖಾಂತರ ಮೇಲಕ್ಕೆ ಎತ್ತಿ ದೋಣಿಯಲ್ಲಿ ಕೂಳ್ಳಿರಿಸಿ ರಕ್ಷಿಸಿದ್ದಾರೆ. ನೀರಿನ ಸೆಳೆತ ಜಾಸ್ತಿ ಇದ್ದ ಕಾರಣ ಕಡವಿನ ಬಾಗಿಲಿನ ದಡಕ್ಕೆ ತಲುಪಿ ಅಲ್ಲಿ ಔಃಒ ಯಂತ್ರ ತಂದು ಅಳವಡಿಸಿ ನಂತರ ದೇವಾಲಯದ ಮುಂಬಾಗದಲ್ಲಿ ತಂದು ಬಿಡಲಾಯಿತು.ಈ ರಕ್ಷಣಾ ಕಾರ್ಯದಲ್ಲಿ ಪ್ರಭಾರ ಘಟಕಾಧಿಕಾರಿ ದಿನೇಶ್. ಬಿ,ಗೃಹರಕ್ಷಕರ ವಸಂತ.ಕೆ,ಈಜುಗಾರರಾದ ಸುದರ್ಶನ್, ಚೆನ್ನಪ್ಪ,ವಿಶ್ವನಾಥ್ ಶೆಟ್ಟಿಗಾರ್, ಹಾಜಿ ಇಸ್ಮಾಯಿಲ್ ಭಾಗವಹಿಸಿದರು ಈವೇಳೆ ಉಪ್ಪಿನಂಗಡಿ ಪೋಲಿಸ್ ಸಿಬ್ಬಂದಿ ಸ್ಥಳದಲ್ಲಿ ಇದ್ದರು.

 

error: Content is protected !!

Join the Group

Join WhatsApp Group