ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧೀನದಲ್ಲಿದ್ದ 7 ಗ್ರಾಮಗಳು ಕಡಬ ಬ್ಲಾಕ್ ಕಾಂಗ್ರೆಸ್ ಗೆ ಹಸ್ತಾಂತರ

(ನ್ಯೂಸ್ ಕಡಬ) newskadaba.com ಸುಳ್ಯ, ಅ. 30. ನೂತನವಾಗಿ ರಚನೆಯಾದ ಕಡಬ  ತಾಲೂಕಿಗೆ ಸುಳ್ಯ ತಾಲೂಕಿನಲ್ಲಿದ್ದ 7 ಗ್ರಾಮಗಳಾದ ಐನೆಕಿದು, ಸುಬ್ರಹ್ಮಣ್ಯ, ಏನೆಕಲ್ಲು, ಬಳ್ಪ, ಕೇನ್ಯ, ಎಡಮಂಗಲ ಮತ್ತು ಎಣ್ಮೂರು  ಗ್ರಾಮಗಳು ಸರಕಾರದ ಆಡಳಿತಾತ್ಮಕವಾಗಿ ಸೇರ್ಪಡೆಗೊಂಡಿದೆ. ಇದರಿಂದಾಗಿ ಸುಳ್ಯ ಬ್ಲಾಕ್ ಕಾಂಗ್ರೆಸ್ ವ್ಯಾಪ್ತಿಯಲ್ಲಿದ್ದ ಈ ಗ್ರಾಮಗಳನ್ನು ಕಡಬ  ಬ್ಲಾಕ್ ಕಾಂಗ್ರೆಸ್  ವ್ಯಾಪ್ತಿಗೆ ಹಸ್ತಾಂತರಿಸುವ ಕಾರ್ಯಕ್ರಮವು ಏನೆಕಲ್ಲು ಗೌರವ್ ವಾರ್ಡನ್ ಹೊಟೇಲ್ ಸಭಾಂಗಣದಲ್ಲಿ ನಡೆಯಿತು.

ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್. ಜಯಪ್ರಕಾಶ್ ರೈ ಯವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ರವರ  ಸಮ್ಮುಖದಲ್ಲಿ ಕಡಬ  ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಣೇಶ್ ಕೈಕುರೆಯವರಿಗೆ ಹಸ್ತಾಂತರಿಸಲಾಯಿತು.

 

ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್ ಜಯಪ್ರಕಾಶ್ ರೈ ಯವರು ಮಾತನಾಡಿ ಆಡಳಿತಾತ್ಮಕವಾಗಿ ಕಡಬ ತಾಲೂಕಿಗೆ ಸೇರ್ಪಡೆಗೊಂಡ ಗ್ರಾಮಗಳು ಎಲ್ಲಾ ಕಛೇರಿ ವ್ಯವಹಾರಗಳಿಗೆ ಮತ್ತು ಚುನಾವಣಾ ವಿಚಾರವಾಗಿ ಕಡಬವನ್ನೇ ಅವಲಂಬಿಸಬೇಕು ಆದ್ದರಿಂದ ಜಿಲ್ಲಾ ಕಾಂಗ್ರೆಸ್ ಸೂಚನೆ ಮೇರೆಗೆ ಸುಳ್ಯ ವ್ಯಾಪ್ತಿಯಲ್ಲಿದ್ದ 7 ಗ್ರಾಮಗಳನ್ನು ಕಡಬ ಬ್ಲಾಕ್ ಕಾಂಗ್ರೆಸ್ ಗೆ ಹಸ್ತಾಂತರಿಸುತ್ತಿದ್ದೇವೆ. ಈ ಎಲ್ಲಾ ಗ್ರಾಮಗಳ ನಾಯಕರು, ಜನಪ್ರತಿನಿಧಿಗಳು, ಕಾರ್ಯಕರ್ತರು ಪಕ್ಷಕ್ಕಾಗಿ ಬಹಳಷ್ಟು ದುಡಿದಿದ್ದು, ಇನ್ನು ಮುಂದೆಯೂ ಬ್ಲಾಕಿನ ಅಧೀನದಲ್ಲಿ ಪಕ್ಷವನ್ನು ಸಂಘಟಿಸಬೇಕು ಎಂದು ಕರೆ ಕೊಟ್ಟರು. ವೇದಿಕೆಯಲ್ಲಿ ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಣೇಶ್ ಕೈಕುರೆ, ಜಿ.ಪಂ. ಸದಸ್ಯ ಪಿ.ಪಿ. ವರ್ಗೀಸ್, ಕೆಪಿಸಿಸಿ ಉಸ್ತುವಾರಿ ಕೃಷ್ಣಪ್ಪ, ತಾ.ಪಂ. ಸದಸ್ಯರಾದ ಅಶೋಕ್ ನೆಕ್ರಾಜೆ, ಫಝಲ್ ಉಪಸ್ಥಿತರಿದ್ದರು. ಅಶೋಕ್ ನೆಕ್ರಾಜೆ ಸ್ವಾಗತಿಸಿ, ಲಕ್ಷ್ಮೀ ಸುಬ್ರಹ್ಮಣ್ಯ ಪ್ರಾರ್ಥಿಸಿದರು. ಬಾಲಕೃಷ್ಣ ಮರೋಳಿ ಕಾರ್ಯಕ್ರಮ ನಿರೂಪಿಸಿದರು.

error: Content is protected !!

Join the Group

Join WhatsApp Group