(ನ್ಯೂಸ್ ಕಡಬ) newskadaba.com ಸುಳ್ಯ, ಆ. 30: ಬೀಳುವ ಸ್ಥಿತಿಯಲ್ಲಿದ್ದ ಕಂದ್ರಪ್ಪಾಡಿಯ ಅಂಚೆ ಕಛೇರಿ ಇರುವ ಕಟ್ಟಡವನ್ನು ದೇವಚಳ್ಳ ಯುವಕ ಮಂಡಲ ಕಂದ್ರಪ್ಪಾಡಿಯ ವತಿಯಿಂದ ಟರ್ಪಾಲು ಹಾಸಿ ತಾತ್ಕಾಲಿಕ ದುರಸ್ಥಿ ಪಡಿಸಿದ್ದಾರೆ.
ಅಂಚೆ ಕಛೇರಿಯ ಕಟ್ಟಡ ಬೀಳುವ ಪರಿಸ್ಥಿತಿ ನಿರ್ಮಾಣವಾದುದ್ದರಿಂದ ಅಂಚೆ ಇಲಾಖೆ ಕಂದ್ರಪ್ಪಾಡಿ ಶಾಖೆಯನ್ನು ಮಾವಿನ ಕಟ್ಟೆ ರಾಜೀವ ಗಾಂಧಿ ಸೇವಾ ಕಟ್ಟಡಕ್ಕೆ ಸ್ಥಳಾಂತರಿಸಲು ತೀರ್ಮಾನಿಸಿತ್ತು. ಸ್ಥಳಾಂತರಗೊಂಡರೆ ಕಂದ್ರಪ್ಪಾಡಿ ಪರಿಸರ ಜನರಿಗೆ ಸಮಸ್ಯೆಯಾಗುವುದನ್ನು ಮನಗಂಡ ಯುವಕ ಮಂಡಲ ಇಂದು ಅಂಚೆ ಕಛೇರಿ ಶಾಖೆ ಇರುವ ಕಟ್ಟಡವನ್ನು ತಾತ್ಕಾಲಿಕ ದುರಸ್ಥಿ ಮಾಡಿದ್ದಾರೆ.