ನಾಳೆ ಸಿಸಿಬಿಯಿಂದ ಇಂದ್ರಜಿತ್ ಲಂಕೇಶ್ ವಿಚಾರಣೆ ➤ ಸ್ಯಾಂಡಲ್​​ವುಡ್​ ತಾರೆಯರಿಗೆ ಹೆಚ್ಚಿದ ಆತಂಕ

(ನ್ಯೂಸ್ ಕಡಬ) newskadaba.com ಬೆಂಗಳೂ. ಆ,30:  ಸ್ಯಾಂಡಲ್​ವುಡ್​ನ ಹಲವು ನಟ ನಟಿಯರು ಹಾಗೂ ಸಂಗೀತ ನಿರ್ದೇಶಕರ ಮೇಲೆ ಡ್ರಗ್ಸ್​ ಬಳಕೆ ಆರೋಪ ಕೇಳಿಬಂದಿರೋ ಪ್ರಕರಣ ಸಂಬಂಧ ತನಿಖೆ ಚುರುಕುಗೊಂಡಿದೆ. ಡ್ರಗ್ಸ್​ ಮಾಫಿಯಾ ಬಗ್ಗೆ ಸಿಸಿಬಿ ಪೊಲೀಸರು ಸುಮೋಟೋ ಕೇಸ್ ದಾಖಲು ಮಾಡಿಕೊಂಡಿದ್ದಾರೆ.

 

ಈ ಮಧ್ಯೆ, ಸ್ಯಾಂಡಲ್​​​ವುಡ್​​ನಲ್ಲಿ ಡ್ರಗ್ಸ್ ಮಾಫಿಯಾ ಇರೋದು ನಿಜ ಅಂತ ನಿರ್ದೇಶಕ ಇಂದ್ರಜಿತ್ ಲಂಕೇಶ್​ ಹೇಳಿದ ಹಿನ್ನೆಲೆ ಅವರಿಗೆ ಸಿಸಿಬಿ ನೋಟಿಸ್ ಜಾರಿ ಮಾಡಿದೆ. ನಾಳೆ ವಿಚಾರಣೆ ನಡೆಯಲಿದೆ ಡ್ರಗ್ಸ್ ದಂಧೆ ಬಗ್ಗೆ ಇಂದ್ರಜಿತ್ ಲಂಕೇಶ್ ಬಹಿರಂಗ ಹೇಳಿಕೆ ನೀಡಿದ ಹಿನ್ನೆಲೆ ಸ್ಯಾಂಡಲ್​ವುಡ್​ನ ಹಲವು ನಟ, ನಟಿಯರಲ್ಲಿ ಈಗಾಗಲೇ ಆತಂಕ ಮನೆ ಮಾಡಿದೆ. ಇಂದ್ರಜಿತ್ ಲಂಕೇಶ್​ ಅವರ ಹೇಳಿಕೆ ಆಧರಿಸಿ, ಸ್ಯಾಂಡಲ್​ವುಡ್ ತಾರೆಯರ ಮೇಲೆ ಸುಮೋಟೋ ಕೇಸ್ ದಾಖಲಾಗುವ ಸಾಧ್ಯತೆ ಇದೆ.

Also Read  ➤ಇನ್ ಸ್ಟಾಗ್ರಾಮ್ ರೀಲ್ಸ್ ➤ಕಾಲು ಜಾರಿ ಬಿದ್ದು ಯುವಕ ಮೃತ್ಯು..!

error: Content is protected !!
Scroll to Top