ಕಡಬ, ಪುತ್ತೂರಿನಲ್ಲಿ ಇಂದು 27 ಮಂದಿಗೆ ಕೊರೋನ ಪಾಸಿಟಿವ್ ದೃಢ

(ನ್ಯೂಸ್ ಕಡಬ) newskadaba.com ಕಡಬ. ಆ,30:  ಕಡಬ ಮತ್ತು ಪುತ್ತೂರು ತಾಲೂಕಿನಲ್ಲಿ ಇಂದು (ರವಿವಾರ) ಒಟ್ಟು 27 ಮಂದಿಗೆ ಕೊರೋನ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ. ಉಭಯ ತಾಲೂಕುಗಳಲ್ಲಿ ಈ ತನಕ ಒಟ್ಟು 672 ಕೊರೋನ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಕಡಬ ತಾಲೂಕಿನ ರಾಮಕುಂಜ ಗ್ರಾಮದ ನಿವಾಸಿಗಳಾದ 27 ವರ್ಷದ ಮಹಿಳೆ ಮತ್ತು 3 ವರ್ಷದ ಹೆಣ್ಣು ಮಗು, ಕೊಣಾಳು ಗ್ರಾಮದ ನಿವಾಸಿಗಳಾದ 45 ವರ್ಷದ ಪುರುಷ ಮತ್ತು 40 ವರ್ಷದ ಮಹಿಳೆ ಹಾಗೂ ನೂಜಿಬಾಳ್ತಿಲ ಗ್ರಾಮದ 21 ವರ್ಷದ ಯುವತಿಯಲ್ಲಿ ಸೋಂಕು ಪತ್ತೆಯಾಗಿದೆ.

ಪುತ್ತೂರು ತಾಲೂಕಿನ ಸರ್ವೆ ಗ್ರಾಮದ ನಿವಾಸಿಗಳಾದ 23 ವರ್ಷದ ಯುವಕ, 57 ವರ್ಷದ ಪುರುಷ ಮತ್ತು 38 ವರ್ಷದ ಮಹಿಳೆ, ನರಿಮೊಗ್ರು ಗ್ರಾಮದ ನಿವಾಸಿ 34 ವರ್ಷದ ಪುರುಷ, ಆರ್ಯಾಪು ಗ್ರಾಮದ ನಿವಾಸಿ 28 ವರ್ಷದ ಪುರುಷ, ಕೆಯ್ಯೂರು ಗ್ರಾಮದ ನಿವಾಸಿ 58 ವರ್ಷದ ಪುರುಷ, ಮುಂಡೂರು ಗ್ರಾಮದ ನಿವಾಸಿಗಳಾದ 24 ವರ್ಷದ ಯುವತಿ ಮತ್ತು 6 ವರ್ಷದ ಬಾಲಕಿ , ಹಿರೇಬಂಡಾಡಿ ಗ್ರಾಮದ ನಿವಾಸಿ 20 ವರ್ಷದ ಯುವತಿಯಲ್ಲಿ ಕೊರೋನ ದೃಢವಾಗಿದೆ.

Also Read  ಎಸ್ಕೆಎಸ್ಎಸ್ಎಫ್ ಮಾಣಿ ಕ್ಲಸ್ಟರ್ ವತಿಯಿಂದ ಆರೋಗ್ಯ ಕೇಂದ್ರದಲ್ಲಿ ಸ್ವಚ್ಛತೆ

 

ನಗರಸಭಾ ವ್ಯಾಪ್ತಿಯ ಬನ್ನೂರು ನಿವಾಸಿಗಳಾದ 36 ವರ್ಷದ ಮಹಿಳೆ ಮತ್ತು 70 ವರ್ಷದ ಮಹಿಳೆ, ತೆಂಕಿಲ ನಿವಾಸಿ 80 ವರ್ಷದ ವೃದ್ಧೆ, ಕೋರ್ಟು ರಸ್ತೆ ನಿವಾಸಿ 60 ವರ್ಷದ ಪುರುಷ, ಪಡೀಲು ನಿವಾಸಿ 26 ವರ್ಷದ ಮಹಿಳೆನಗರ ಪೊಲೀಸ್ ವಸತಿ ಗೃಹದ 56 ವರ್ಷದ ಪುರುಷ, ನೆಹರೂನಗರ ನಿವಾಸಿಗಳಾದ 45 ವರ್ಷದ ಪುರುಷ, 48 ವರ್ಷದ ಪುರುಷ ಮತ್ತು 57 ವರ್ಷದ ಮಹಿಳೆ, ದರ್ಬೆ ನಿವಾಸಿಗಳಾದ 48 ವರ್ಷದ ಪುರುಷ ಮತ್ತು 24 ವರ್ಷದ ಪುರುಷ, ಸಂಜಯನಗರ ನಿವಾಸಿ 21 ವರ್ಷದ ಯುವತಿ, ಕೆಮ್ಮಾಯಿ ನಿವಾಸಿ 77 ವರ್ಷದ ಪುರುಷರಲ್ಲಿ ಕೊರೋನ ಸೋಂಕು ಕಾಣಿಸಿಕೊಂಡಿದೆ.

Also Read  ತಲಕಾವೇರಿ ಗುಡ್ಡ ಕುಸಿತ➤ಬಂಟ್ವಾಳದ ಓರ್ವ ಅರ್ಚಕರು ನಾಪತ್ತೆ..!!!

 

error: Content is protected !!
Scroll to Top