Skip to content
(ನ್ಯೂಸ್ ಕಡಬ) newskadaba.com ಮಂಗಳೂರು, ಆ. 29. ಕೊವೀಡ್ – 19 ಹಿನ್ನೆಲೆಯಲ್ಲಿ ನ್ಯಾಯಾಲದಲ್ಲಿ ಯಾವುದೇ ಪ್ರಕರಣಗಳನ್ನು ಇತ್ಯರ್ಥಗೊಳಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಪ್ರತೀ ತಾಲೂಕು ಮತ್ತು ಜಿಲ್ಲಾ ನ್ಯಾಯಾಲಯದಲ್ಲಿ ಸೆಪ್ಪೆಂಬರ್ 19 ರಂದು ಬಾಕಿ ಇರುವ ಪ್ರಕರಣಗಳನ್ನು ಇ – ಲೋಕ್ ಅದಾಲತ್ ಮೂಲಕ ಇತ್ಯರ್ಥಪಡಿಸಲಾಗುವುದು ಎಂದು ರಾಜ್ಯ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅಭಯ್ ಓಕಾ ಅವರು ತಿಳಿಸಿದ್ದಾರೆ .
ಅವರು ಶುಕ್ರವಾರ ದ . ಕ ಜಿಲ್ಲಾ ನ್ಯಾಯಾಲಯದಲ್ಲಿ ನಡೆದ ವಿಡಿಯೋ ಕಾನ್ಪರೆನ್ಸ್ ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿ, ನ್ಯಾಯಾಲದಲ್ಲಿ ಬಾಕಿ ಇರುವ ಪ್ರಕರಣಗಳನ್ನು ಇತ್ಯರ್ಥಗೊಳಿಸಲು ಸಾರ್ವಜನಿಕರಿಗೆ ನ್ಯಾಯಾಲಯವು ಬಹು ದೊಡ್ಡ ಅವಕಾಶವನ್ನು ನೀಡಿದೆ . ಜನರು ಇ – ಲೋಕ್ ಅದಾಲತ್ ಅನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡು ತಮ್ಮ ಪ್ರಕರಣಗಳನ್ನು ಇತ್ಯರ್ಥ ಪಡಿಸಿಕೊಳ್ಳಬಹುದು ಎಂದು ಸಾರ್ವಜನಿಕರಿಗೆ ಸಂದೇಶ ನೀಡಿದರು . ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಕಾರ್ಯಕಾರಿ ಅಧ್ಯಕ್ಷ ನ್ಯಾ . ಅರವಿಂದ ಕುಮಾರ್ ಮಾತನಾಡಿ , ಇ – ಲೋಕ್ ಅದಾಲತ್ ನಲ್ಲಿ ಚೆಕ್ ವಂಚನೆ , ಆರ್ಥಿಕ ವಸೂಲಾತಿ ಪ್ರಕರಣ , ಕಾರ್ಮಿಕರ ಇನ್ಸೂರೆನ್ಸ್ , ರಾಜಿಯಾಗುವ ಕುಟುಂಬ ಸಮಸ್ಯೆ , ಅಪಘಾತ ಪ್ರಕರಣ , ಮೋಟಾರು ಅಪಘಾತ ಪರಿಹಾರ ಪ್ರಕರಣ , ಭೂ ವಂಚನೆ ಪ್ರಕರಣಗಳಿಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ . ಈ ಅದಾಲತ್ ನಲ್ಲಿ ಆನ್ ಲೈನ್ ಮುಖಾಂತರ ಕೂಡ ಭಾಗವಹಿಸಬಹುದಾಗಿದೆ . ಕಕ್ಷಿದಾರರು ತಮ್ಮ ವಕೀಲ ಕಚೇರಿಯಿಂದ ಅಥವಾ ತಮ್ಮ ಮನೆಯಿಂದ ಭಾಗವಹಿಸಲು ಅವಕಾಶ ನೀಡಲಾಗಿದೆ . ಕೇಸ್ ವಿಚಾರಣೆಯನ್ನು ನಡೆಸುವ ಸಂದರ್ಭದಲ್ಲಿ ಅಗತ್ಯವಾದ ದಾಖಲೆಯನ್ನು ಸಿದ್ಧಪಡಿಸಿಕೊಂಡಿರಬೇಕೆಂದು ಸೂಚಿಸಿದರು . ರಾಜಿ ಮಾಡಿಕೊಳ್ಳುವ ಪ್ರಕರಣಗಳು ಇದ್ದಲ್ಲಿ ಎರಡು ಕಡೆಯಿಂದ ಸಮ್ಮತಿ ಇರಬೇಕು ಎಂದು ಅವರು ಹೇಳಿದರು .
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2000 ಪ್ರಕರಣವನ್ನು ಇ– ಅದಾಲತ್ ಮೂಲಕ ಇತ್ಯರ್ಥಗೊಳಿಸುವ ಗುರಿ ಹೊಂದಲಾಗಿದೆ. ಜಿಲ್ಲೆಯಲ್ಲಿ ಒಟ್ಟು 52 ಸಾವಿರ ಪ್ರಕರಣಗಳು ವಿಚಾರಣೆಗೆ ಬಾಕಿ ಇದ್ದು , 15 ಸಾವಿರ ಪ್ರಕರಣಗಳನ್ನು ಲೋಕ ಅದಾಲತ್ ನಲ್ಲಿ ಇತ್ಯರ್ಥಗೊಳಿಸಲಾಗುವುದು ಎಂದು ದ. ಕ. ಜಿಲ್ಲಾ ಸತ್ರ ನ್ಯಾಯಾಧೀಶ ಮುರಳೀಧರ ಪೈ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ದ . ಕ . ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ದ ಸದಸ್ಯ ಕಾರ್ಯದರ್ಶಿ ಎ . ಜೆ . ಶಿಲ್ಪಾ ಉಪಸ್ಥಿತರಿದ್ದರು .
error: Content is protected !!
ನ್ಯೂಸ್ ಕಡಬ ವಾಟ್ಸಪ್ ಬಳಗಕ್ಕೆ ಸೇರಿ