ಸೋಲಾರ್ ಕಾರ್ ► ಮಣಿಪಾಲದ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳ ಹೊಸ ಆವಿಷ್ಕಾರ..!!

(ನ್ಯೂಸ್ ಕಡಬ) newskadaba.com ಉಡುಪಿ, ಸೆ.18,  ದಿನದಿಂದ ದಿನಕ್ಕೆ ಪೆಟ್ರೋಲ್ ಬೆಲೆ ಗಗನಕ್ಕೇರುತ್ತಿದೆ. ಮುಂದಿನ ದಿನಗಳಲ್ಲಿ ಬೇಕಾದಷ್ಟು ಪೆಟ್ರೋಲ್ ಸಿಗುತ್ತದೆ ಎಂಬ ನಂಬಿಕೆ ಇಲ್ಲ. ಎಲ್ಲದಕ್ಕೂ ಪರ್ಯಾಯ ಹುಡುಕುವ ಕಾಲ ಬಂದಿದೆ. ಹೀಗಿರುವಾಗ ಉಚಿತವಾಗಿ ಸಿಗುವ ಸೂರ್ಯ ಶಕ್ತಿಯತ್ತ ಎಲ್ಲರೂ ಮುಖ ಮಾಡುತ್ತಿದ್ದು, ಮಣಿಪಾಲದ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಸೋಲಾರ್ ಕಾರನ್ನು ತಯಾರು ಮಾಡಿದ್ದಾರೆ.

ನಾಲ್ಕು ಮಂದಿ ಆರಾಮವಾಗಿ ಓಡಾಡಬಹುದಾದ ಈ ಕಾರು ಸಂಪೂರ್ಣವಾಗಿ ಸೌರಶಕ್ತಿಯಿಂದಲೇ ಓಡುತ್ತೆದೆ. ಕಾರಿನ ಮೇಲೆ, ಮುಂದೆ-ಹಿಂಭಾಗ ಸೋಲಾರ್ ಪ್ಯಾನಲ್ ಜೋಡಿಸಿದ್ದಾರೆ. ಕಾರಿನ ಒಳಗೆ ಬ್ಯಾಟರಿ ಬ್ಯಾಕಪ್ ಇದೆ. ಈ ಮೂಲಕ ಸೋಲಾರ್ ಎನರ್ಜಿ ಸಂಗ್ರಹ ಆಗುತ್ತೆ.

ಒಂದು ಸಾರಿ ಕಾರೊಳಗಿರುವ ಬ್ಯಾಟರಿ ಫುಲ್ ಆದ್ರೆ ಮಿನಿಮಂ 100 ಕಿಲೋಮೀಟರ್ ಹೋಗ್ಬಹುದು. 40-50 ಸ್ಪೀಡಲ್ಲಿ ಹೋದ್ರೆ 180 ಕಿಲೋಮೀಟರ್ ದೂರ ಕ್ರಮಿಸಬಹುದು. ಸೂರ್ಯನ ಕಿರಣ 7 ಗಂಟೆ ನಿರಂತರವಾಗಿ ಕಾರಿನ ಮೇಲೆ ಬಿದ್ದರೆ ಮತ್ತೆ ಬ್ಯಾಟರಿ ತುಂಬಿಕೊಳ್ಳುತ್ತೆ. ಮೂರು ಗಂಟೆಯಲ್ಲಿ ವಿದ್ಯುತ್ತನ್ನು ಬ್ಯಾಟರಿಗೆ ಚಾರ್ಜ್ ಮಾಡುವ ವ್ಯವಸ್ಥೆಯನ್ನೂ ಕಾರೊಳಗೆ ಅಳವಡಿಸಲಾಗಿದೆ.

Also Read  ನಿವೃತ್ತ ಯೋಧ ದಿ.ಸುಂದರ ಗೌಡ ಅಂಗಣರವರಿಗೆ ನುಡಿನಮನ

ಎಲೆಕ್ಟ್ರಿಕಲ್, ಐಟಿ, ಮೆಕ್ಯಾನಿಕಲ್, ಏರೋನಾಟಿಕ್ ವಿಭಾಗದ ವಿದ್ಯಾರ್ಥಿಗಳು ಈ ಆವಿಷ್ಕಾರಕ್ಕೆ ಕೈಜೋಡಿಸಿದ್ದಾರೆ. ಮಣಿಪಾಲ ವಿದ್ಯಾರ್ಥಿಗಳು 30 ಲಕ್ಷ ರೂಪಾಯಿಯಲ್ಲಿ ಈ ಸೋಲಾರ್ ಕಾರನ್ನು ತಯಾರಿಸಿದ್ದಾರೆ ಅಂತ ಪ್ರಧ್ಯಾಪಕ ಉಮಾನಂದ ಹೇಳಿದ್ದಾರೆ.
ಅರ್ಧ ಕ್ವಿಂಟಾಲ್ ತೂಗುವ ಈ ಕಾರಿನ ಇಂಜಿನ್‍ನ ಅಳವಡಿಕೆ ಕೆಲಸ ಬಾಕಿಯಿದೆ. ಟೆಸ್ಟ್ ರೈಡ್‍ನಲ್ಲಿ ಕಾರು ಸಕ್ಸಸ್ಸಾಗಿದ್ದು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಇತ್ತೀಚೆಗೆ ಹಸಿರು ಇಂಧನ ಅನಿವಾರ್ಯ ಎಂದು ಘೋಷಿಸಿದ್ದರು. ಈ ಹಿನ್ನೆಲೆಯಲ್ಲಿ ಎಂಐಟಿ ವಿದ್ಯಾರ್ಥಿಗಳ ಸಾಧನೆ ಹೆಚ್ಚಿನ ಮಹತ್ವ ಪಡೆದಿದೆ.

error: Content is protected !!
Scroll to Top