ಅಕ್ರಮ ಗಾಂಜಾ ಸಾಗಾಟ ➤ ಅರೋಪಿಗಳ ಹೆಡೆಮುರಿ ಕಟ್ಟಿದ ಸಿಸಿಬಿ ಪೊಲೀಸರು

(ನ್ಯೂಸ್ ಕಡಬ) newskadaba.com ಮಂಗಳೂರು. ಆ,30:  ಪಿಕಪ್ ವಾಹನದಲ್ಲಿ 132 ಕೆ,ಜಿ ಗಾಂಜಾ ಸಾಗಾಟ ಮಾಡುತ್ತಿದ್ದ ಇಬ್ಬರು ಖದೀಮರನ್ನು ಬಂಧಿಸಿ ,ಕಾರನ್ನು ಸಿಸಿಬಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಘಟನೆ ನಗರದ ಪಂಪ್ ವಲ್ ಬಳಿಯ ತಾರೆತೋಟ ಎಂಬಲ್ಲಿ ನಡೆದಿದೆ.

 

ಕಾಸರಗೋಡು ಜಿಲ್ಲೆಯ ಮಂಗಲ್ಪಾಡಿ ಗ್ರಾಮದ ಉಪ್ಪಳ ನಿವಾಸಿ ಕಲಂದರ್ ಮಹಮ್ಮದ್ ಶಾ(35) ಹಾಗೂ ಕುಂಜತ್ತೂರು ಗ್ರಾಮ ಉದ್ಯಾವರ ನಿವಾಸಿ ಮೊಯ್ದೀನ್ ಅನ್ಸಾರ್ (27) ಬಂಧಿತ ಆರೋಪಿಗಳು ಈ ಆರೋಪಿಗಳು ಮಂಗಳೂರು ಹಾಗೂ ಕಾಸರಗೋಡು ಜಿಲ್ಲೆಗಳಿಗೆ ಬೃಹತ್ ಪ್ರಮಾಣದಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದರು. ಇದನ್ನ ಪತ್ತೆ ಹಚ್ಚಿರುವ ಸಿಸಿಬಿ ಘಟಕದ ಪೊಲೀಸರು 132 ಕೆ.ಜಿ ಗಾಂಜಾ ತುಂಬಿದ ಗೋಣಿ ಚೀಲ ಸಹಿತ ಸಾಗಾಟಕ್ಕೆ ಬಳಸಿದ 2 ವಾಹನ, 2 ಮೊಬೈಲ್ ವಶಪಡಿಸಿಕೊಂಡಿದ್ದಾರೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

Also Read  ಬಿಎಂಟಿಸಿಯ ನೂತನ ಬಸ್ ಗಳಿಗೆ ಸಿಎಂ ಚಾಲನೆ

error: Content is protected !!
Scroll to Top