ಮಂಗಳೂರಿನಲ್ಲಿ ಭೀಕರ ಅಪಘಾತ – ವಿದ್ಯಾರ್ಥಿಗಳು ಪವಾಡ ಸದೃಶವಾಗಿ ಪಾರು

(ನ್ಯೂಸ್ ಕಡಬ) newskadaba.com ಮಂಗಳೂರು, ಆ. 30: ನಗರದ ಪಂಪ್‌ವೆಲ್ ಫ್ಲೈಓವರ್‌ನಲ್ಲಿ ಕಳೆದ ದಿನ ರಾತ್ರಿ ನಡೆದ ಭೀಕರ ಅಪಘಾತದಿಂದ ಕಾರಿನಲ್ಲಿದ್ದ ವಿದ್ಯಾರ್ಥಿಗಳು ಪವಾಡ ಸದೃಶವಾಗಿ ಪಾರಾಗಿದ್ದಾರೆ.

ಅಪಘಾತದಲ್ಲಿ ನಡೆದ ಕಾರು ಕೇರಳ ನೋಂದಣಿ ಮಾರುತಿ ಎ-ಸ್ಟಾರ್ ಕಾರು ಆಗಿದ್ದು, ಅದು ಫ್ಲೈಓವರ್‌ನಲ್ಲಿ ಪಲ್ಟಿಯಾಗಿದೆ. ಈ ಸಂದರ್ಭದಲ್ಲಿ ಫ್ಲೈ ಓವರ್‌ನ ರಕ್ಷಣಾತ್ಮಕ ಸೈಡ್‌ವಾಲ್ ಕಾರು ಕೆಳಗೆ ಬೀಳದಂತೆ ತಡೆದಿದೆ. ಮೂವರು ಕಾಸರಗೋಡಿನ ವಿದ್ಯಾರ್ಥಿಗಳು, ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣಕ್ಕೆ ಓರ್ವ ಸ್ನೇಹಿತನನ್ನು ಬಿಟ್ಟು ಹಿಂತಿರುಗುತ್ತಿದ್ದ ಸಂದರ್ಭದಲ್ಲಿ ಈ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ. ಅಪಘಾತದಲ್ಲಿ ಕಾರು ಸಂಪೂರ್ಣ ಹಾನಿಗೊಂಡಿದ್ದು ಅಪಘಾತದಿಂದಾಗಿ ಫ್ಲೈಓವರ್‌ನಲ್ಲಿ ಒಂದು ಗಂಟೆ ಕಾಲ ಸಂಚಾರ ಅಸ್ತವ್ಯಸ್ತವಾಗಿದೆ. ದಕ್ಷಿಣ ಸಂಚಾರ ಪೊಲೀಸ್ ಠಾಣೆಯ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ಆಗಮಿಸಿ ಸಂಚಾರದಟ್ಟನೆಯನ್ನು ನಿಭಾಯಿಸಿದ್ದಾರೆ.

Also Read  06.10.2020 News Highlights

 

 

error: Content is protected !!
Scroll to Top