9ನೇ ತರಗತಿ ವಿದ್ಯಾರ್ಥಿಗೆ ಕೊರಿಯಾರ್ ಮೂಲಕ ಬಂದ ಗಾಂಜಾ ➤ ಓರ್ವ ಅರೆಸ್ಟ್

(ನ್ಯೂಸ್ ಕಡಬ) newskadaba.com ಬೆಂಗಳೂರು, ಆ. 30.  9ನೇ ತರಗತಿ ವಿದ್ಯಾರ್ಥಿಯೋರ್ವನಿಗೆ ಕೊರಿಯಾರ್ ಮೂಲಕ ಮಾದಕ ವಸ್ತು ಬಂದ ಪರಿಣಾಮ ಪೋಷಕರು ಪೊಲೀಸರಿಗೆ ದೂರು ನೀಡಿದ್ದು, ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.

ಆಗಸ್ಟ್ 15ರಂದು ಬಾಲಕನಿಗೆ ಗಾಂಜಾ ಇರುವಂತಹ ಪ್ಯಾಕ್ ಲಭ್ಯವಾಗಿದ್ದು, ಇದನ್ನು ಕಂಡ  ಪೋಷಕರು ಪಡೆದಾಗ ಮಗ ಗಾಂಜಾ ಚಟಕ್ಕೆ ಒಳಗಾಗಿರುವುದು ತಿಳಿದುಬಂದಿದೆ. ಈ ಕುರಿತು ಪೋಷಕರು ಪೊಲೀಸರಿಗೆ ದೂರು ನೀಡಿದ್ದರಿಂದ 32ರ ಹರೆಯದ ಓರ್ವ ಮಾರಾಟಗಾರನನ್ನು ಬಂಧಿಸಲಾಗಿದೆ. ಇದೀಗ ಪೊಲೀಸರು ನಗರದಲ್ಲಿ ಬೆಳೆಯುತ್ತಿರುವ ಡ್ರಗ್ಸ್ ಮಾಫಿಯಾದ ಕುರಿತು ಪತ್ತೆ ಮಾಡಲು ಪ್ರಯತ್ನಿಸುತ್ತಿದ್ದಾರೆ.

Also Read  ಕೆರೆಗೆ ಈಜಲು ಹೋದ ವಿದ್ಯಾರ್ಥಿ ಮೃತ್ಯು..!

 

error: Content is protected !!
Scroll to Top