ಅಕ್ರಮ ಜಾನುವಾರು ಸಾಗಾಟ ➤ ಬಂಟ್ವಾಳ ಪೋಲಿಸರಿಂದ ಆರೋಪಿ ಅರೆಸ್ಟ್

(ನ್ಯೂಸ್ ಕಡಬ) newskadaba.com ಬಂಟ್ವಾಳ. ಆ,30:  ಆಕ್ರಮವಾಗಿ ಟೆಂಪೋ ರಿಕ್ಷಾದಲ್ಲಿ ದನ ಸಾಗಾಟ ಮಾಡುತ್ತಿದ್ದ ವೇಳೆ ದಾಳಿ ನಡೆಸಿದ ಗ್ರಾಮಾಂತರ ಪೋಲೀಸರು ಆರೋಪಿ ಸಹಿತ ದನಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಮಂಚಿ ಹತ್ತಿರದ ಇರಾ ಗ್ರಾಮದ ಕುಂಡಾವು ಎಂಬಾಲ್ಲಿ ಒಂದು ಎತ್ತು ಹಾಗೂ ಒಂದು ಕರುವನ್ನ ಅಕ್ರಮವಾಗಿ ಮಾಂಸ ಮಾಡುವ ಉದ್ದೇಶದಿಂದ ಸಾಗಾಟ ಮಾಡಲಾಗುತ್ತಿದ್ದ ಪೋಲೀಸರಿಗೆ ರೆಡ್ ಹ್ಯಾಂಡ್ ಸಿಕ್ಕಿ ಬಿದ್ದಿದ್ದಾರೆ.

 

ಖಚಿತ ಮಾಹಿತಿ ಆಧಾರದಲ್ಲಿ ದಾಳಿ ನಡೆಸಿದ ಪೋಲಿಸರು ಇರಾ ನಿವಾಸಿ ಚಾಲಕ ಇಬ್ರಾಹಿಂ ಎಂಬಾತನನ್ನು ವಶಕ್ಕೆ ಪಡೆದುಕೊಂಡು, ಮತ್ತೊಬ್ಬ ಆರೋಪಿ ಕುಕ್ಕಾಜೆ ನಿವಾಸಿ ಮುನೀರ್ ಎಂಬಾತ ಪೋಲೀಸರ ದಾಳಿ ವೇಳೆ ಪರಾರಿಯಾಗಿದ್ದಾನೆ. ಆರೋಪಿಗಳಿಂದ 1,54,500 ರೂ. ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಇನ್ನು, ಡಿ. ವೈ ಎಸ್ ಪಿ ವೆಲೆಂಟೈನ್ ಡಿ.ಸೋಜ ಮಾರ್ಗದರ್ಶನದಲ್ಲಿ ವೃತ್ತ ನಿರೀಕ್ಷಕ ಟಿ.ಡಿ ನಾಗರಾಜ್ ಅವರ ನೇತ್ರತ್ವದಲ್ಲಿ ಬಂಟ್ವಾಳ ಗ್ರಾಮಾಂತರ ಎಸ್ ಐ ಸಂಜೀವ ಕೆ ಅವರ ತಂಡ ದಾಳಿ ನಡೆಸಿ ದನ ಸಾಗಾಟ ಮಾಡುತ್ತಿದ್ದ ಆರೋಪಿಯನ್ನ ವಶಕ್ಕೆ ಪಡೆದುಕೊಂಡಿದ್ದಾರೆ.

Also Read  ಶಸ್ತ್ರಚಿಕಿತ್ಸಾ ವಿಧಾನಗಳ ವಿಷಯದಲ್ಲಿ ಆಯುರ್ವೇದ ವೈದ್ಯರು ಎಂಬಿಬಿಎಸ್ ವೈದ್ಯರಿಗೆ ಸಮಾನರಲ್ಲ..!   ➤ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು  

 

 

error: Content is protected !!
Scroll to Top