ಕಡಬ: ಬ್ಲಾಕ್ ಕಾಂಗ್ರೆಸ್ ಉಸ್ತುವಾರಿಯಾಗಿ ನಂದಕುಮಾರ್ ಮಡಿಕೇರಿ ನೇಮಕ

(ನ್ಯೂಸ್ ಕಡಬ) newskadaba.com ಕಡಬ, ಆ. 29. ಬ್ಲಾಕ್ ಕಾಂಗ್ರೆಸ್ ಕಡಬ ಪಕ್ಷದ ಉಸ್ತುವಾರಿಯನ್ನಾಗಿ  ನಂದಕುಮಾರ್ ಮಡಿಕೇರಿಯವರನ್ನು ನೇಮಿಸಲಾಗಿದೆ.

ರಾಜ್ಯ ಮಟ್ಟದ ಕಾಂಗ್ರೆಸ್ ನಾಯಕರಾಗಿರುವ ಇವರನ್ನು  ಕೆ.ಪಿ.ಸಿ.ಸಿ  ಅದ್ಯಕ್ಷ. ಡಿ ಕೆ ಶಿವಕುಮಾರ್ ರವರು ನೇಮಕಗೊಳಿಸಿದ್ದು,  ಸುಳ್ಯ ವಿಧಾನಸಭಾ ಕ್ಷೇತ್ರದ ಕಡಬ ಬ್ಲಾಕ್ ನಲ್ಲಿ  ಕಾಂಗ್ರೆಸ್ ಪಕ್ಷವನ್ನು  ಸಂಪೂರ್ಣ ಬಲಿಷ್ಟ ಗೊಳಿಸುವಲ್ಲಿ ಶ್ರಮಿಸಬೇಕೆಂದು ಸೂಚಿಸಿದ್ದಾರೆ ಎಂದು ಪಕ್ಷದ ಪ್ರಮುಖರು ತಿಳಿಸಿದ್ದಾರೆ. ಮಡಿಕೇರಿ ನಗರಸಭೆಯ ಮಾಜಿ ಅದ್ಯಕ್ಷರಾಗಿದ್ದ ಇವರು ಐದು ಬಾರಿ  ನಗರಸಬೆಯ ಸದಸ್ಯರಾಗಿರುತ್ತಾರೆ. ಇವರು  ಮಡಿಕೇರಿ ತಾಲೂಕು ವ್ಯಾಪ್ತಿಯಲ್ಲಿ  ಕಾಂಗ್ರೇಸ್ ಪಕ್ಷವನ್ನು  ಬೆಳೆಸುವಲ್ಲಿ  ಪಕ್ಷದ ನಾಯಕರೊಂದಿಗೆ ಹಾಗೂ ಜನಪ್ರತಿನಿಧಿಗಳೊಂದಿಗೆ  ಪ್ರಯತ್ನಿಸಿದ್ದಾರೆ.

Also Read  ಗೃಹ ಲಕ್ಷ್ಮಿ ಯೋಜನೆಯ ಹಣದಿಂದ ಇಡೀ ಗ್ರಾಮಕ್ಕೆ ಊಟ ಹಾಕಿಸಿದ ವೃದ್ಧ ಮಹಿಳೆ

 

error: Content is protected !!
Scroll to Top