ಮರ್ಧಾಳ: ಸಾಮಾಜಿಕ ಮುಂದಾಳು ಮೋನಪ್ಪ ಗೌಡ ಪಂಜೋಡಿಯವರಿಗೆ ಶ್ರದ್ದಾಂಜಲಿ ಸಭೆ

(ನ್ಯೂಸ್ ಕಡಬ) newskadaba.com ಕಡಬ, ಆ. 29. ದಿ| ಮೋಹನ ಗೌಡ ಪಂಜೋಡಿಯವರಿಗೆ ಮರ್ದಾಳ ದ ಅಂಬೆಡ್ಕರ್ ಭವನದಲ್ಲಿ ಇಂದು ಮಾಜಿ ಜಿಲ್ಲಾ ಪರಿಷತ್ ಸದಸ್ಯ ಹಾಜಿ ಸಯ್ಯದ್ ಮೀರಾ ಸಾಹೇಬ್‌ ರವರ ನೇತೃತ್ವದಲ್ಲಿ ಶ್ರದ್ಧಾಂಜಲಿ ಸಭೆ ನಡೆಯಿತು.

ಸಭೆಯಲ್ಲಿ ದಿವಂಗತರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನುಡಿನಮನ ಸಲ್ಲಿಸಿ ಮಾತನಾಡಿದ ಜಿ ಪಂ ಸದಸ್ಯ ಪಿ ಪಿ ವರ್ಗೀಸ್ ನುಡಿನಮನ ಸಲ್ಲಿಸಿ ಅವರ ಆದರ್ಶ, ಸರಳ ವ್ಯಕ್ತಿತ್ವದ ಬಗ್ಗೆ ಗುಣಗಾನ ಮಾಡಿ ಅವರ ಅಕಾಲಿಕ ಮರಣದ ದುಃಖವನ್ನು ಸಹಿಸಿಕೊಳ್ಳುವ ಶಕ್ತಿ ಯನ್ನು ತಮಗೂ ಅವರ ಕುಟುಂಬದ ಎಲ್ಲರಿಗೂ ಪರಮಾತ್ಮ ಕರುಣಿಸಲಿ ಎಂದು ಶ್ರೀ ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದರು. ದಿವಂಗತ ಮೋಹನ ಗೌಡರ ಪುತ್ರ ರೋಹಿತ್, ಸಹೋದರರಾದ ಗಂಗಾದರ ಗೌಡ, ಶ್ರೀಧರ ಗೌಡ, ಗಣಪಯ್ಯ ಗೌಡ, ಕುಟುಂಬಸ್ಥರಾದ ಯೋಗೀಶ್ ಪಂಜೋಡಿ, ಗುಡ್ಡಪ್ಪ ಗೌಡ ಪಂಜೋಡಿ, ಪ್ರಮುಖರಾದ ಸುಂದರ ಗೌಡ ಬಳೇರಿ, ಉದಯಶಂಕರ್ ಕುಬುಲಾಡಿ ಮೊದಲಾದವರು ಉಪಸ್ಥಿತರಿದ್ದರು. ಕಡಬ ತಾಲೂಕು ರೈತ ಸಂಘದ ಅದ್ಯಕ್ಷ ವಿಕ್ಟರ್ ಮಾರ್ಟಿಸ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

Also Read  ಸೋಮವಾರದಂದು ಕಡಬದಲ್ಲಿ ಕಾಂಗ್ರೆಸ್ ತಾಲೂಕು ಮಟ್ಟದ ಕಾರ್ಯಕರ್ತರ ಸಮಾವೇಶ ► ರಾಜ್ಯದ ವಿವಿಧ ಸಚಿವರು ಕಾರ್ಯಕ್ರಮದಲ್ಲಿ ಉಪಸ್ಥಿತಿ

error: Content is protected !!
Scroll to Top