ಶಕ್ತಿ ವಿದ್ಯಾ ಸಂಸ್ಥೆಯಲ್ಲಿ ಇ-ಕ್ರೀಡಾ ದಿನಾಚರಣೆ

(ನ್ಯೂಸ್ ಕಡಬ)  newskadaba.com ಮಂಗಳೂರು, ಆ. 29. ಕ್ರೀಡೆ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಯೋಜನಕಾರಿಯಾದುದು. ಪ್ರಸ್ತುತ ದಿನಗಳಲ್ಲಿ ಜನರು ದೈಹಿಕ ಹಾಗೂ ಮಾನಸಿಕ ಅನಾರೋಗ್ಯ, ಒತ್ತಡಗಳಿಗೆ ಒಳಗಾಗಿದ್ದಾರೆ. ಅದಕ್ಕಾಗಿ ಕ್ರೀಡೆಯೊಂದು ಔಷದಿಯಂತೆ ಕೆಲಸ ಮಾಡುತ್ತದೆಕ್ರೀಡೆಗಳು ವ್ಯಾಯಾಮಗಳ ಮೂಲಕ ಮಾನಸಿಕ ಒತ್ತಡವನ್ನು ನಿವಾರಿಸಬಹುದು. ನಡೆಯುವುದು, ಓಡುವುದು ಮೊದಲಾದ ವ್ಯಾಯಾಮಗಳ ಮೂಲಕ ಹಾಗೂ ಒಳಾಂಗಣ ಕ್ರೀಡೆಗಳನ್ನು ಆಡುವುದರ ಮೂಲಕ ದಿನಗಳಲ್ಲಿ ಮನೆಯ ಒಳಗೆ ಇರುವಂತಹ ವಯಸ್ಕರು ಹಾಗೂ ಮಕ್ಕಳು ತಮ್ಮ ದೈಹಿಕ ಹಾಗೂ ಮಾನಸಿಕ ಒತ್ತಡವನ್ನು ನಿವಾರಿಸಬಹುದು ಎಂದು ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣದ ನಿರ್ದೇಶಕರು ಡಾ.ಕಿಶೋರ್ ಕುಮಾರ್ ಕರೆ ನೀಡಿದರು.

ದ್ಯಾನ್ಚಂದ್ರವರು ಕ್ರೀಡೆಗೆ ನೀಡಿದ ಮಹತ್ವ, ಕೊಡುಗೆಯ ಕಾರಣಕ್ಕಾಗಿ ಇಂದು ಅವರ ಹುಟ್ಟು ಹಬ್ಬವನ್ನು ರಾಷ್ಟ್ರೀಯ ಕ್ರೀಡಾ ದಿನವೆಂದು ಆಚರಿಸುತ್ತೇವೆ. ಇಂದಿನ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಸಾಧನೆಯ ಜೊತೆಗೆ, ಕ್ರೀಡೆಗಳಲ್ಲೂ ಭಾಗವಹಿಸಬೇಕು. ಮೂಲಕ ದೈಹಿಕ ಸಾಮಥ್ರ್ಯದ ಕಡೆಗೆ ಗಮನ ಹರಿಸಬೇಕು. ದೈಹಿಕ ವ್ಯಾಯಮ ಕ್ರೀಡೆ ದೇಹದ ಆರೋಗ್ಯದ ಜೊತೆಗೆ ಬುದ್ಧಿಯನ್ನು ಚುರುಕಾಗಿಸುತ್ತದೆ. ಒಳಾಂಗಣ ಕ್ರೀಡೆಗಳು ಮನರಂಜನೆಯ ಜೊತೆಗೆ ಬುದ್ಧಿ ಸಾಮಥ್ರ್ಯವನ್ನು ಚುರುಕುತನವನ್ನು ಹೆಚ್ಚಿಸುತ್ತದೆ. ವಿದ್ಯಾರ್ಥಿಗಳು ಇಂದಿನ ಆಹಾರ ಪದ್ಧತಿ, ಜೀವನಕ್ರಮದಿಂದ ಅನಾರೋಗ್ಯಕ್ಕೂ ತುತ್ತಾಗುತ್ತಾರೆ. ಅದಕೋಸ್ಕರ ಮಕ್ಕಳು ಬಾಲ್ಯದಲ್ಲೇ ಕ್ರೀಡೆ, ವ್ಯಾಯಾಮಗಳನ್ನು ನಿರಂತರವಾಗಿ ಅಭ್ಯಾಸಿಸಬೇಕು ಎಂದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ತಮ್ಮ ಮನೆಯವರೊಂದಿಗೆ ಆಡಿದ ಗ್ರಾಮೀಣ ಕ್ರೀಡೆಗಳ ವೀಡಿಯೋವನ್ನು ಬಿತ್ತರಿಸಲಾಯಿತು. ಗ್ರಾಮೀಣ ಕ್ರೀಡೆಗಳಲ್ಲಿ ಹಾಗೂ ಕ್ರೀಡಾ ದಿನಾಚರಣೆಯ ಅಂಗವಾಗಿ ಕ್ವಿಜ್ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದವರ ಹೆಸರನ್ನು ಶಿಕ್ಷಕಿ ದೀಪ್ತಿ ಓದಿದರು.

Also Read  ಬಂಟ್ವಾಳ: ಪ್ರೀತಿಗೆ ಅಡ್ಡ ಬರುತ್ತಿದ್ದಾನೆ ಎಂದು ತನ್ನ ಸ್ನೇಹಿತನ ಕೊಲೆ ► ಕಬಡ್ಡಿಗೆ ತೆರಳುವ ನೆಪದಲ್ಲಿ ನೀರಿಗೆ ದೂಡಿ ಹಾಕಿದ ಭೂಪ

ಕಾರ್ಯಕ್ರಮದಲ್ಲಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಆಡಳಿತ ಮೊಕ್ತೆಸರರಾದ ಡಾ. ಕೆ.ಸಿ. ನಾೈಕ್, ಶಕ್ತಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಸಂಜೀತ್ ಸಿ ನಾೈಕ್, ಮುಖ್ಯ ಸಲಹೆಗಾರರಾದ ರಮೇಶ್ ಕೆ, ಶಾಲಾ ಅಭಿವೃದ್ಧಿ ಅಧಿಕಾರಿ ಪ್ರಖ್ಯಾತ್ ರೈ, ಶಕ್ತಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪ್ರಭಾಕರ ಜಿ ಎಸ್, ಶಕ್ತಿ ವಸತಿ ಶಾಲೆಯ ಪ್ರಾಚಾರ್ಯರಾದ ವಿದ್ಯಾಕಾಮತ್ ಜಿ, ಗೋಪಾಲಕೃಷ್ಣ ಪ್ರಿಸ್ಕೂಲ್ ಸಹನಿರ್ದೇಶಕರಾದ ನಿಮಾ ಸಕ್ಸೇನಾ, ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿ, ಹೆತ್ತವರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಶಿಕ್ಷಕಿ ಸ್ವಾತಿ ಕಾರ್ಯಕ್ರಮ ನಿರೂಪಿಸಿದರು.

Also Read  ಸಿಬ್ಬಂದಿಯ ನಿರ್ಲಕ್ಯದಿಂದ ವಿಮಾನ ಮಿಸ್ ಮಾಡಿಕೊಂಡ ರಾಜ್ಯಪಾಲ ಗೆಹ್ಲೋಟೆ

error: Content is protected !!
Scroll to Top