ನೂಜಿಬಾಳ್ತಿಲ: ಶಾಲೆಗೆ ಕಡಬ ತಾ.ಪಂ. ಅಧ್ಯಕ್ಷೆ ರಾಜೇಶ್ವರಿ ಭೇಟಿ

(ನ್ಯೂಸ್ ಕಡಬ) newskadaba.com ನೂಜಿಬಾಳ್ತಿಲ, ಆ. 29. ನೂಜಿಬಾಳ್ತಿಲ ಗ್ರಾಮದ ಕಲ್ಲುಗುಡ್ಡೆ ಸರಕಾರಿ ಉ.ಹಿ.ಪ್ರಾ. ಶಾಲೆಗೆ  ಕಡಬ ತಾ.ಪಂ. ನೂತನ ಅಧ್ಯಕ್ಷೆ ರಾಜೇಶ್ವರಿ ಕನ್ಯಾಮಂಗಲ ಹಾಗೂ ಉಪಾಧ್ಯಕ್ಷೆ ಜಯಂತಿ ಆರ್. ಗೌಡ ಅವರು ಶನಿವಾರ ಭೇಟಿ ನೀಡಿದರು.

ನೂಜಿಬಾಳ್ತಿಲ ಕ್ಲಸ್ಟರ್ ವ್ಯಾಪ್ತಿಯ ಮನೆ, ವಠಾರ ಪಾಠ ಶಾಲಾ ಚಟುವಟಿಕೆ, ಶಾಲೆಯಲ್ಲಿ ನಡೆಯುತ್ತಿರುವ  ಅಭಿವೃದ್ಧಿ ಕೆಲಸ ಹಾಗೂ ಮಳೆಹಾನಿ ಯೋಜನೆಯಡಿ ಮಂಜೂರಾದ ಅನುದಾನದ ಬಳಕೆ ಬಗ್ಗೆ ಮಾಹಿತಿ ಪಡೆದುಕೊಂಡರು. ನೂಜಿಬಾಳ್ತಿಲ ಕ್ಲಸ್ಟರ್ ಸಿ.ಆರ್.ಪಿ. ಗೋವಿಂದ ನಾಯಕ್, ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಬಾಲಕೃಷ್ಣ ಎಂ. ಅವರು ಮಾಹಿತಿ ನೀಡಿದರು.

ಕಡಬಕ್ಕೆ ಬಿಇಒ ಕಛೇರಿ ಬರಲಿ;

ಕಡಬ ತಾಲೂಕಾಗಿದ್ದು, ಶೈಕ್ಷಣಿಕ ದೃಷ್ಟಿಯಿಂದ ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿಯನ್ನು ಶೀಘ್ರ ಕಡಬದಲ್ಲಿ ಪ್ರಾರಂಭಿಸಲು ಕ್ರಮಕೈಗೊಳ್ಳುವಂತೆ ತಾ.ಪಂ. ಅಧ್ಯಕ್ಷ, ಹಾಗೂ ಉಪಾಧ್ಯಕ್ಷರಲ್ಲಿ ಶಾಲೆಯವರು ಕೇಳಿಕೊಂಡರು. ಕಡಬ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ರಮೇಶ್ ಕಲ್ಪುರೆ, ಸುಳ್ಯ ಬಿಜೆಪಿ ಮಂಡಲ ಪ್ರ.ಕಾರ್ಯದರ್ಶಿ ಪ್ರಕಾಶ್ ಎನ್.ಕೆ., ಸಿ.ಎ.ಬ್ಯಾಂಕ್ ಮಾಜಿ ನಿರ್ದೇಶಕ ಚಂದ್ರಶೇಖರ ಗೌಡ ನೂಜಿ, ಗ್ರಾ.ಪಂ. ಮಾಜಿ ಸದಸ್ಯರಾದ ರಾಮಚಂದ್ರ ಎಸ್.ಗೌಡ, ರಜಿತಾ ಕೆ., ಕಿಟ್ಟು ಕೆ. ಕಲ್ಲುಗುಡ್ಡೆ, ಹರೀಶ್ ಎನ್., ಪ್ರಮುಖರಾದ ಜಯಂತ್ ಬರೆಮೇಲು, ಉಮೇಶ್ ಶೆಟ್ಟಿ ಸಾಯಿರಾಮ್, ರವೀಂದ್ರ ನಿಡ್ಡೋ, ರವಿಪ್ರಸಾದ್ ಕರಿಂಬಿಲ, ಎಸ್.ಡಿ.ಎಂ.ಸಿ. ಉಪಾಧ್ಯಕ್ಷೆ ಕಮಲಾಕ್ಷಿ ಬರೆಮೇಲು, ಮಾಜಿ ಅಧ್ಯಕ್ಷ ಮೋನಪ್ಪ ಗೌಡ ಅರಿಮಜಲು, ಶಿಕ್ಷಕಿಯರಾದ  ಶೈಲಾ  ಟಿ.ಐ., ಗೀತಾ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಗೋವಿಂದ ನಾಯಕ್ ಸ್ವಾಗತಿಸಿ, ವಂದಿಸಿದರು.

error: Content is protected !!
Scroll to Top