ಸೆ. 1 ರಿಂದ ದೇವಾಲಯಗಳ ಕೆಲವು ಸೇವೆಗಳಿಗೆ ಅವಕಾಶ ➤ ಸಚಿವ ಕೋಟ

(ನ್ಯೂಸ್ ಕಡಬ) newskadaba.com ಮಂಗಳೂರು, ಆ. 29: “ರಾಜ್ಯದ ಕೆಲವು ದೇವಾಲಯಗಳಲ್ಲಿ ಸೆಪ್ಟೆಂಬರ್ 1 ರಿಂದ ಕೆಲ ಸೇವೆಗಳಿಗೆ ಅವಕಾಶ ನೀಡುವ ಸಾಧ್ಯತೆ ಇದೆ” ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಇಂದು ತಿಳಿಸಿದ್ದಾರೆ.

ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ಅವರು,”ಸೆಪ್ಟೆಂಬರ್ 1 ರಿಂದ ದೇವಾಲಯಗಳಲ್ಲಿ ಕೆಲವು ಸೇವೆಗಳಿಗೆ ಅವಕಾಶ ನೀಡುವ ಬಗ್ಗೆ ಮುಜರಾಯಿ ಇಲಾಖೆಯು ಆರೋಗ್ಯ ಇಲಾಖೆಯನ್ನು ಸಂಪರ್ಕಿಸಿದ್ದು ಆರೋಗ್ಯ ಇಲಾಖೆ ಶಿಫಾರಸು ಮಾಡಿದರೆ ಮಾತ್ರ ದೇವಾಲಯಗಳಲ್ಲಿ ಕೆಲವು ಸೇವೆಗಳಿಗೆ ಅವಕಾಶ ನೀಡಲಾಗುತ್ತದೆ. ಆದರೆ ಅನ್ನ ಸಂತರ್ಪಣೆಗೆ ಅವಕಾಶ ನೀಡಲಾಗುವುದಿಲ್ಲ” ಎಂದು ತಿಳಿಸಿರುವುದಾಗಿ ವರದಿಯಾಗಿದೆ.

Also Read  ಡಿ.21: ಬೆಳ್ಳಾರೆ ಝಕರಿಯಾ ಜುಮಾ ಮಸೀದಿಯಲ್ಲಿ ► ವಾರ್ಷಿಕ ದಫ್ ರಾತೀಬ್ ಹಾಗೂ ಧಾರ್ಮಿಕ ಮತ ಪ್ರವಚನ

 

 

error: Content is protected !!
Scroll to Top