ಬೆಳ್ತಂಗಡಿ: ಊರಿನವರ ಸಹಕಾರದಿಂದ ಮೃತ್ಯುಂಜಯ ನದಿಗೆ ಕಾಲುಸಂಕ ನಿರ್ಮಾಣ

(ನ್ಯೂಸ್ ಕಡಬ) newskadaba.com ಚಾರ್ಮಾಡಿ, ಆ. 29. ಇಲ್ಲಿನ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೀಟಿಗೆಯಿಂದ ಮುಗುಳಿತಡ್ಕಕ್ಕೆ ಸಂಪರ್ಕ ಕಲ್ಪಿಸುವ ಕೊಳಂಬೆ ಎಂಬಲ್ಲಿ ಮೃತ್ಯುಂಜಯ ನದಿಗೆ ಊರವರೇ ಒಟ್ಟುಗೂಡಿ ಕಾಲುಸಂಕ ನಿರ್ಮಿಸಿದರು.

ಮಳೆಗಾಲದಲ್ಲಿ ಮುಗುಳಿತಡ್ಕದ ಸುಮಾರು 50 ರಷ್ಟು ಕುಟುಂಬಗಳು ಚಾರ್ಮಾಡಿ, ಕಕ್ಕಿಂಜೆ ಪೇಟೆ, ಗ್ರಾಮ ಪಂಚಾಯತ್ ಕಛೇರಿ, ಗ್ರಾಮ ಕರಣಿ ಕಛೇರಿ, ಬ್ಯಾಂಕ್ ವ್ಯವಹಾರಗಳು, ಹಾಲಿನ ಸೊಸೈಟಿ, ಆಸ್ಪತ್ರೆ ಇತ್ಯಾದಿ ನಿತ್ಯ ವ್ಯವಹಾರಕ್ಕೆ ಬರಬೇಕಾದರೆ ಈ ಕಾಲು ಸಂಕವನ್ನೇ ಅವಲಂಬಿಸಬೇಕಾಗಿದೆ. ಸುತ್ತು ಬಳಿದು ಬರುವುದಾದರೆ ಅರಣೆ ಪಾದೆ ಸಮೀಪದ ಕಿಂಡಿ ಅಣೆಕಟ್ಟೆಯನ್ನು ಬಳಸಿ ಬರಬೇಕು, ಅಲ್ಲದೆ ಈ ಕಿಂಡಿ ಅಣೆಕಟ್ಟೆ ಕೂಡಾ ಉತ್ತಮ ಸ್ಥಿತಿಯಲ್ಲಿ ಇಲ್ಲ. ಕೊಳಂಬೆಯಲ್ಲಿ ಕಾಲುಸಂಕ ನಿರ್ಮಿಸಿದ ಕಾರಣ ಒಂದು ಕಿ.ಮೀ ದೂರ ನಡೆದು ಬಂದರೆ ಚಾರ್ಮಾಡಿ ಪೇಟೆಯನ್ನು ಸಂಪರ್ಕಿಸಬಹುದು.

Also Read  17 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಅರೆಸ್ಟ್

error: Content is protected !!
Scroll to Top