2 ವರ್ಷದ ಪುಟ್ಟ ಮಗುವಿಗೆ ಚಿತ್ರಹಿಂಸೆ ನೀಡಿದ ಪಾಪಿ ತಾಯಿ

(ನ್ಯೂಸ್ ಕಡಬ) newskadaba.com ಬೆಂಗಳೂರು, ಆ. 29: ಮಗು ಅಳುವುದನ್ನು ನಿಲ್ಲಿಸಿಲ್ಲ ಎಂಬ ಕಾರಣಕ್ಕೆ ತಾಯಿ ಹಾಗೂ ಅಜ್ಜಿ ಸೇರಿಕೊಂಡು ಮಗುವಿಗೆ ಚಿತ್ರಹಿಂಸೆ ನೀಡಿದ ಘಟನೆ ಬೆಂಗಳೂರಿನ ಗುರಪ್ಪನಪಾಳ್ಯದಲ್ಲಿ ನಡೆದಿದೆ.

ಇಮ್ರಾನ್ ಪಾಷಾ ಹಾಗೂ ಅಜೀರಾ ದಂಪತಿಗೆ 4 ಮಕ್ಕಳಿದ್ದು, 5ನೇ ಮಗುವಿನ ಹೆರಿಗೆಂದು ತಾಯಿ ತವರು ಮನೆಗೆ ಬಂದಿದ್ದಾಳೆ. ಆ ವೇಳೆ 2 ವರ್ಷದ ನಾಲ್ಕನೇ ಮಗು ಅಪ್ಪ ಬೇಕೆಂದು ಹಠ ಹಿಡಿದಿದೆ. ಇದರಿಂದ ಕೋಪಗೊಂಡ ತಾಯಿ ಮತ್ತು ಅಜ್ಜಿ ಮಗುವಿನ ಹೊಟ್ಟೆ, ಮುಖಕ್ಕೆ ಮನಬಂದಂತೆ ಥಳಿಸಿ ಬಾಯಿಗೆ ಪ್ಲಾಸ್ಟರ್ ಹಾಕಿ ಚಿತ್ರಹಿಂಸೆ ನೀಡಿದ್ದಾರೆ. ಈ ಬಗ್ಗೆ ಪತ್ನಿ ಮತ್ತು ಅತ್ತೆಯ ವಿರುದ್ಧ ಮಗುವಿನ ತಂದೆ ಸುದ್ದಗುಂಟೆಪಾಳ್ಯ ಪೊಲೀಸರಿಗೆ ದೂರು ನೀಡಿದ್ದ ಕಾರಣ ಪೊಲೀಸರು ಆರೋಪಿ ಮಹಿಳೆಯರನ್ನು ಬಂಧಿಸಿದ್ದಾರೆ.

Also Read  ಅಸಮರ್ಪಕ ರಸ್ತೆ ವ್ಯವಸ್ಥೆ; ವೃದ್ದರನ್ನು ಕುರ್ಚಿಯಲ್ಲಿ ಕೂರಿಸಿ ಆಸ್ಪತ್ರೆಗೆ ಹೊತ್ತೊಯ್ದ ಯುವಕರು

 

error: Content is protected !!
Scroll to Top