(ನ್ಯೂಸ್ ಕಡಬ) newskadaba.com ಬೆಳ್ಳಾರೆ, ಆ. 29. ಗ್ರಾಮದ ಚೀಮುಳ್ಳು ಎಂಬಲ್ಲಿ ಕೇಲಪ್ಪ ಎಂಬವರ ಮನೆಯು ಇತ್ತೀಚೆಗೆ ಸುರಿದ ಭಾರೀ ಮಳೆಗೆ ಕುಸಿದು ಬಿದ್ದು ಸಂಪೂರ್ಣ ಹಾನಿಯಾಗಿದೆ. ಹಲವು ವರ್ಷಗಳಿಂದ ಚಿಕ್ಕ ಹಂಚಿನ ಮನೆಯಲ್ಲಿ ವಾಸಿಸುತ್ತಿದ್ದ ಇವರು ಮನೆ ಕುಸಿದು ಬಿದ್ದ ದಿನ ಮನೆಯಲ್ಲಿ ಇರಲಿಲ್ಲ.
ಪತ್ನಿ ಮನೆಗೆ ಹೋಗಿದ್ದ ಇವರು ವಾಪಾಸು ಮನೆಗೆ ಬರುವಾಗ ಮನೆ ಕುಸಿದು ಬಿದ್ದು ಮನೆಯೊಳಗಿದ್ದ ಬಟ್ಟೆ, ಆಹಾರ ವಸ್ತುಗಳು ಹಾಗು ಇನ್ನಿತರ ಮನೆ ಸಾಮಾನುಗಳು ಮಣ್ಣಿನಡಿಗೆ ಬಿದ್ದು ಹಾಳಾಗಿವೆ. ವಿದ್ಯುತ್ ಸಂಪರ್ಕವೂ ಕಡಿತಗೊಂಡಿರುವುದರಿಂದ ಭಾರೀ ಅಪಾಯ ತಪ್ಪಿದಂತಾಗಿದೆ. ಇದೀಗ ಇವರಿಗೆ ವಾಸಿಸಲು ಮನೆಯಿಲ್ಲದೆ ಅಲ್ಲಿಯೆ ಪಕ್ಕದಲ್ಲಿ ಟರ್ಪಾಲ್ ನಿಂದ ಚಿಕ್ಕ ಗುಡಿಸಲು ನಿರ್ಮಿಸಿ ಮಾಡುತ್ತಿದ್ದಾರೆ. ಇವರಿಗೆ ಪಂಚಾಯತ್ ವತಿಯಿಂದ ಮಳೆ ಹಾನಿ ಯೋಜನೆಯಡಿ ಮನೆ ನಿರ್ಮಿಸಿಕೊಡಬೇಕೆಂದು ಅವರು ಒತ್ತಾಯಿಸಿದ್ದಾರೆ.