ಶಾಸಕ ಎಸ್.ಅಂಗಾರರ ಪತ್ನಿಗೂ ಕೊರೋನಾ

(ನ್ಯೂಸ್ ಕಡಬ) newskadaba.com ಸುಳ್ಯ, . 29: ಕಳೆದ ದಿನ ಕೊರೋನಾ ಪಾಸಿಟಿವ್ ಬಂದಿದ್ದ ಸುಳ್ಯ ಶಾಸಕ ಎಸ್.ಅಂಗಾರ ಅವರ ಪತ್ನಿಗೂ ಇಂದು ಕೊರೋನಾ ದೃಢಪಟ್ಟಿದೆ. ಅಂಗಾರರಿಗೆ ಹಾಗೂ ಅವರ ಕಾರು ಚಾಲಕ ಮುರಳಿಯವರಿಗೆ ಪಾಸಿಟಿವ್ ಬಂದಿತ್ತು. ಅವರಿಬ್ಬರೂ ಕ್ವಾರಂಟೈನ್‍ನಲ್ಲಿದ್ದಾರೆ. ಇಂದು ಇವರಿಬ್ಬರ ಮನೆಯವರಿಗೆ ಕೊರೋನಾ ಆಂಟಿಜೆನ್ ಪರೀಕ್ಷೆ ನಡೆಸಲಾಯಿತು. ಈ ವೇಳೆ ಅಂಗಾರರ ಪತ್ನಿಗೆ, ಅವರ ಮನೆಯಲ್ಲಿರುವ ಇಬ್ಬರು ಬಂಧುಗಳಿಗೆ ಪಾಸಿಟಿವ್ ಪತೆಯಾಗಿದೆ.ಮುರಳಿಯವರ ಮನೆಯವರಿಗೆ ನೆಗೆಟಿವ್ ಬಂದಿದೆ.

Also Read  ಎಸಿಬಿ ರಚನೆಯನ್ನು ರದ್ದುಗೊಳಿಸಿ ಲೋಕಾಯುಕ್ತಕ್ಕೆ ಪವರ್ ನೀಡಿ ಆದೇಶ ಹೊರಡಿಸಿದ ಹೈಕೋರ್ಟ್..!

error: Content is protected !!
Scroll to Top