ಆನ್ಲೈನ್ ತರಗತಿಯ ಪಾಠ ಕೇಳುತ್ತಿದ್ದ ವೇಳೆ ಕುತ್ತಿಗೆಗೆ ಜೋಕಾಲಿ ಬಿಗಿದು ಬಾಲಕ ಮೃತ್ಯು

(ನ್ಯೂಸ್ ಕಡಬ) newskadaba.com ದೊಡ್ಡಬಳ್ಳಾಪುರ, ಆ. 29. ಆನ್‌ಲೈನ್‌ ಕ್ಲಾಸ್ ನಡೆಯುತ್ತಿದ್ದ ವೇಳೆ  ಸೀರೆಯಿಂದ ಕಟ್ಟಿದ್ದ ಜೋಳಿಗೆ ಬಾಲಕನ ಕುತ್ತಿಗೆಗೆ ಬಿಗಿದು ಮೃತಪಟ್ಟ ಘಟನೆ ದರ್ಗಾ ಜೋಗಹಳ್ಳಿಯಲ್ಲಿ ನಡೆದಿದೆ.

ಮೃತನನ್ನು ದರ್ಗಾಜೋಗಳ್ಳಿಯ ಮಂಜುನಾಥ್ ಅವರ ಪುತ್ರ ವಿಶ್ವಾಸ್(10) ಎಂದು ಗುರುತಿಸಲಾಗಿದೆ. ಕೊಡಿಗೆಹಳ್ಳಿ ಸಹ್ಯಾದ್ರಿ ಶಾಲೆಯಲ್ಲಿ 5ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಈತ ಕೊರೊನಾ ಹಿನ್ನೆಲೆ ಆನ್‌ಲೈನ್‌‌‌‌‌ ಕ್ಲಾಸ್‌ ಮೂಲಕ ತರಗತಿ ಮಾಡಲಾಗುತ್ತಿದ್ದು, ಶುಕ್ರವಾರದಂದು ಮಧ್ಯಾಹ್ನ ಮೂರು ಗಂಟೆ ವೇಳೆಗೆ ಆನ್‌ಲೈನ್‌ ಕ್ಲಾಸ್‌ ಇದ್ದ ಕಾರಣ ಆತನ ಪೋಷಕರು ಆತನನ್ನು ರೂಂಗೆ ಕಳುಹಿಸಿದ್ದಾರೆ. ಮನೆಯಲ್ಲಿ ಪುಟ್ಟ ಮಗುವಿಗೆಂದು ಕಟ್ಟಿದ್ದ ಸೀರೆಯಿಂದ ಜೋಳಿಗೆ ಕಟ್ಟಲಾಗಿದ್ದು,‌ ಅದರಲ್ಲೇ ಕುಳಿತು ಪಾಠ ಕೇಳುತ್ತಿದ್ದ ಈತನು ಇನ್ನೂ ಕೋಣೆಯಿಂದ ಯಾಕೆ ಬಂದಿಲ್ಲ ಎಂದು ಪೋಷಕರು ರೂಂ ನ ಒಳಗೆ ಹೋಗಿ ನೋಡಿದಾಗ ಜೋಳಿಗೆ ಕತ್ತಿಗೆ ಬಿಗಿದಿ ಬಾಲಕ ಮೃತಪಟ್ಟಿರುವುದು ಕಂಡುಬಂದಿದೆ. ಘಟನೆಯ ಬಗ್ಗೆ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ಈ 4 ರಾಶಿಯವರಿಗೆ ಐಶ್ವರ್ಯ ಅಭಿವೃದ್ಧಿ ಉಂಟಾಗುತ್ತದೆ ಕಷ್ಟಗಳು ಪರಿಹಾರವಾಗುತ್ತದೆ

 

error: Content is protected !!
Scroll to Top