ಕೊನೆಗೂ ಅಂತಿಮ ಪದವಿ ಪರೀಕ್ಷೆಗೆ ದೊರೆಯಿತು ಗ್ರೀನ್ ಸಿಗ್ನಲ್

(ನ್ಯೂಸ್ ಕಡಬ) newskadaba.com ನವದೆಹಲಿ, ಆ. 28. ಕೊರೊನಾ ವೈರಸ್ ಹಿನ್ನೆಲೆಯಿಂದಾಗಿ ಅಂತಿಮ ಪದವಿ ಪರೀಕ್ಷೆಗಳನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ನಿರಾಕರಿಸಿದೆ.

ಪರೀಕ್ಷೆಯು ಯುಜಿಸಿ ನಿರ್ದೇಶನದಂತೆ ನಡೆಯಲಿದ್ದು, ಪರೀಕ್ಷೆ ಮಾಡದೇ ಪಾಸ್ ಮಾಡುವಂತಿಲ್ಲ ಎಂದು ನ್ಯಾಯಮೂರ್ತಿ ಅಶೋಕ್ ಭೂಷಣ್ ಅವರ ನೇತೃತ್ವದ ತ್ರಿಸದಸ್ಯ ಪೀಠ ಈ ಮಹತ್ವದ ತೀರ್ಪನ್ನು ಇಂದು ಪ್ರಕಟಿಸಿದೆ. ಈ ತೀರ್ಪಿನಿಂದಾಗಿ ಲಕ್ಷಾಂತರ ವಿದ್ಯಾರ್ಥಿಗಳು ನಿಟ್ಟುಸಿರು ಬಿಡುವಂತಾಗಿದ್ದು, ಪದವಿ ಪರೀಕ್ಷಾ ಗೊಂದಲಕ್ಕೆ ತೆರೆ ಬಿದ್ದಂತಾಗಿದೆ.

Also Read  ತರಬೇತಿ ಜಾಗೃತಿಗೆ ಇವಿಎಂ, ವಿವಿಪ್ಯಾಟ್ ಬಳಕೆ

error: Content is protected !!
Scroll to Top