ಪತ್ನಿಯ ಕಣ್ಣೆದುರೇ ಸಮುದ್ರ ಪಾಲಾದ ಪತಿ…!



(ನ್ಯೂಸ್ ಕಡಬ) newskadaba.com ಕುಂದಾಪುರ, ಆ. 28. ಈಜಲು ತೆರಳಿದ್ದ ಪತಿ ಸಮುದ್ರ ಪಾಲಾದ ಘಟನೆ ಇಂದು ಮಧ್ಯಾಹ್ನ ಗೋಕರ್ಣ ಸಮುದ್ರ ತೀರದಲ್ಲಿ ಜರಗಿದೆ.





ಮೃತರನ್ನು ಅಂಕೋಲಾ ತಾಲೂಕಿನ ಅವರ್ಸಾ ಮೂಲದ ಅರವಿಂದ ಪಾಂಡುರಂಗ ಶೆಣೈ(45) ಎಂದು ಗುರುತಿಸಲಾಗಿದೆ. ಇವರು ಕೆಲ ತಿಂಗಳಿನಿಂದ ಅವರ್ಸಾದಲ್ಲಿಯೇ ಇದ್ದು, ಇಂದು ತನ್ನ ಪತ್ನಿಯೊಂದಿಗೆ ಮಹಾಬಲೇಶ್ವರ ದೇವರ ದರ್ಶನ ಪಡೆದ ಬಳಿಕ ಗೋಕರ್ಣ ಸಮುದ್ರ ತೀರಕ್ಕೆ ವಿಹಾರಕ್ಕೆಂದು ಹೋಗಿದ್ದರೆನ್ನಲಾಗಿದೆ. ಇವರಿಗೆ ಸಮುದ್ರದಲ್ಲಿ ಈಜಾಡಲು ಮನಸ್ಸಾಗಿದ್ದರಿಂದ ಪತ್ನಿಯಲ್ಲಿ ಹೇಳಿ ನೀರಿಗೆ ಇಳಿದಿದ್ದು, ತೀರದಲ್ಲಿ ಕುಳಿತ ಪತ್ನಿ ನೋಡ ನೋಡುತ್ತಿದ್ದಂತೆ ಭಾರೀ ಗಾತ್ರದ ಸಮುದ್ರದ ಅಲೆಗೆ ಸಿಲುಕಿ ಮೃತಪಟ್ಟಿದ್ದಾರೆ. ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






error: Content is protected !!
Scroll to Top