ಕರಾವಳಿಯಲ್ಲೊಂದು ಹೃದಯವಿದ್ರಾವಕ ಘಟನೆ ➤ ಮಗನಿಗೆ ಕೊರೊನಾ ಸೊಂಕು ಮನನೊಂದು ತಂದೆ ಆತ್ಮಹತ್ಯೆ.!

(ನ್ಯೂಸ್ ಕಡಬ) newskadaba.com ಉಡುಪಿ. ಆ,28:  ಮಗನಿಗೆ ಕೊರೊನಾ ಸೊಂಕು ಬಂದ ಹಿನ್ನಲೆ ಮನನೊಂದು ತಂದೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಶಿರ್ವಾದ ಕಳತ್ತೂರು ಗ್ರಾಮದ ಜ್ಯೋತಿ ನಗರ ಎಂಬಲ್ಲಿ ನಡೆದಿದೆ. ಸುಂದರಮೂಲ್ಯ (60) ಮನನೊಂದು ಆತ್ಮಹತ್ಯೆ ಮಾಡಿಕೊಂಡವರು.

 

ಇವರು ಬಿಪಿ, ಶುಗರ್ ಖಾಯಿಲೆಯಿಂದ ಬಳಲುತ್ತಿದ್ದರು. ಅಲ್ಲದೆ ಚಿಕಿತ್ಸೆಯಲ್ಲಿದ್ದರು. ಈ ನಡುವೆ ಇವರು ಪುತ್ರ ಶ್ವಾಸಕೋಶಕ್ಕೆ ಸಂಬಂಧಿಸಿದ ಖಾಯಿಲೆಯಿಂದ ಬಳಲುತ್ತಿದ್ದರು. ಮಣಿಪಾಲದ ಕೆಎಮ್ ಸಿ ಆಸ್ಪತ್ರೆಗೆ ದಾಖಲಿಸಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಈ ವೇಳೆ ಅವರಲ್ಲಿ ಕೊರೋನಾ ಸೊಂಕು ಧೃಡಪಟ್ಟಿದೆ. ವಿಚಾರ ತಿಳಿದ ಅವರ ತಂದೆ ಸುಂದರ ಮೂಲ್ಯ ಜೀವನದಲ್ಲಿ ಜಿಗುಪ್ಸೆಗೊಂಡು ಮನೆಯಲ್ಲಿ ರಾತ್ರಿ ವೇಳೆಯಲ್ಲಿ ವಿಷ ಪದಾರ್ಥ ಸೇವಿಸಿದ್ದರು. ಬಳಿಕ ಅವರನ್ನು ಉಡುಪಿಯ ಸಿಟಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಇದೀಗ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

Also Read  ಕಳ್ಳ ಸಾಗಾಣಿಕೆ – ಇಬ್ಬರು ಅರೆಸ್ಟ್..!

error: Content is protected !!
Scroll to Top