ಇಂಡಿಯಾ ಸೈಕಲ್ ಫಾರ್ ಚೇಂಜ್ – ಸಮೀಕ್ಷೆಯಲ್ಲಿ ಪಾಲ್ಗೊಳ್ಳಲು ಅವಕಾಶ

(ನ್ಯೂಸ್ ಕಡಬ) newskadaba.com ಮಂಗಳೂರು, ಆ. 28. ಇಂಡಿಯಾ ಸೈಕಲ್  ಫಾರ್‍ ಚೇಂಜ್  ಎಂಬ ಸ್ಪರ್ಧೆಯಲ್ಲಿ ಮಂಗಳೂರು ಸ್ಮಾರ್ಟ್‍ ಸಿಟಿ ಲಿಮಿಟೆಡ್ ಭಾಗವಹಿಸುತ್ತಿದ್ದು, ಈ ಸ್ಪರ್ಧೆಯ ಭಾಗವಾಗಿ ಒಂದು ಸಮೀಕ್ಷೆಯನ್ನು ನಡೆಸಲಾಗುತ್ತಿದೆ. ಇದರ ಮೂಲಕ ಸಾರ್ವಜನಿಕರು ಎದುರಿಸುತ್ತಿರುವ ಸಮಸ್ಯೆಗಳು, ನಾಗರಿಕರ ಆದ್ಯತೆಗಳು ಹಾಗೂ ನಗರಕ್ಕೆ ಬೇಕಾಗಿರುವ ವ್ಯವಸ್ಥೆಗಳ ಬಗ್ಗೆ ಸಮೀಕ್ಷೆಯ ಮೂಲಕ ನಾಗರಿಕರು ತಿಳಿಸಬಹುದು. ಈ ಸೂಚನೆ ಹಾಗೂ ಸಲಹೆಗಳನ್ನು ನೀಡುವ ಮೂಲಕ ನಾಗರಿಕರು ಬಹುಸಂಖ್ಯೆಯಲ್ಲಿ ಭಾಗವಹಿಸಿ ಮಂಗಳೂರಿಗೆ ಬೇಕಾದ ವ್ಯವಸ್ಥೆಯನ್ನು ತರುವಲ್ಲಿ ತಮ್ಮ ಸಹಕಾರವನ್ನು ನೀಡಬೇಕು.

ನಾಗರಿಕರು ಈ ಸಮೀಕ್ಷೆಯನ್ನು ವ್ಯಾಪಕವಾಗಿ ತಮ್ಮೊಳಗೆ ಹಂಚಿಕೊಂಡು ಸಮೀಕ್ಷೆಯಲ್ಲಿ ಭಾಗವಹಿಸಬೇಕು. ಈ ಸಮೀಕ್ಷೆ ಆನ್‍ಲೈನ್ ಮೂಲಕ ನಡೆಯಲಿದ್ದು,  https://forms.gle/nxaUxqFAGi1uDWui9 ಲಿಂಕನ್ನು  ಅಥವಾ ಕೆಳಗಿನ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಭಾಗವಹಿಸಬಹುದು. ಹೆಚ್ಚಿನ ಮಾಹಿತಿಗಾಗಿ ವ್ಯವಸ್ಥಾಪಕ ನಿರ್ದೇಶಕರು, ಮಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ದೂರವಾಣಿ ಸಂಖ್ಯೆ 0824 2986321  ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

Also Read  ದ.ಕ. ಜಿಲ್ಲೆಯಲ್ಲಿ ಭಾರಿ ಮಳೆ ➤ ಆ. 7 ಹಾಗೂ ಆ.8 ರಂದು ರೆಡ್ ಅಲರ್ಟ್ ಘೋಷಣೆ

error: Content is protected !!
Scroll to Top