ಏರ್ ಇಂಡಿಯಾ ಕಚೇರಿ ಸ್ಥಳಾಂತರ

(ನ್ಯೂಸ್ ಕಡಬ) newskadaba.com ಮಂಗಳೂರು, ಆ. 27. ನಗರದ ಲಾಲ್‍ಭಾಗ್ ಹ್ಯಾಟ್‍ ಹಿಲ್ಸ್‍ನಲ್ಲಿ ಕಾರ್ಯಾಚರಿಸುತ್ತಿರುವ ಏರ್ ಇಂಡಿಯಾ ಸಂಸ್ಥೆಯ ಕಾಯ್ದಿರಿಸುವಿಕೆ ಟಿಕೆಟ್ ಮತ್ತು ಮಾರಾಟ  ಕಚೇರಿಯನ್ನು ಆಗಸ್ಟ್ 31 ರಿಂದ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸ್ಥಳಾಂತರಿಸಲಾಗುವುದು.

ಈ ಕಚೇರಿಯು ಪ್ರತೀ ಸೋಮವಾರದಿಂದ ಶನಿವಾರದವರೆಗೆ ಬೆಳಿಗ್ಗೆ 9.45 ಗಂಟೆಯಿಂದ ಸಂಜೆ 5.20 ಗಂಟೆಯವರೆಗೆ ಕಾರ್ಯಾಚರಿಸಲಿದೆ. ಹೆಚ್ಚಿನ ಮಾಹಿತಿಗಾಗಿ ಏರ್ ಇಂಡಿಯಾ ಕಚೇರಿಯು ದೂರವಾಣಿ ಸಂಖ್ಯೆ 0824 2220450, 2220451, ಏರ್ ಇಂಡಿಯಾ ಕಾಲ್ ಸೆಂಟರ್ 18602331407 ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

Also Read  ಆಧಾರ್ ಜೋಡಣೆ ► ಡೆಡ್ ಲೈನ್ ಯಾವಾಗ ಗೊತ್ತೆ...???

error: Content is protected !!