ಡಾ|| ಮುರಲೀ ಮೋಹನ ಚೂಂತಾರು ಕೃತಿಗೆ ‘ಶ್ರೇಷ್ಠ ಪುಸ್ತಕ ಪ್ರಶಸ್ತಿ’ ಸನ್ಮಾನ

(ನ್ಯೂಸ್ ಕಡಬ) newskadaba.com ಆ. 28. ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ 2018-19ನೇ ಸಾಲಿನ ಶ್ರೇಷ್ಠ ಪುಸ್ತಕ ಪ್ರಶಸ್ತಿಗಳನ್ನು ಬುಧವಾರ ವೆಬ್ ಮೀಟಿಂಗ್ ಮೂಲಕ ಪ್ರದಾನ ಮಾಡಲಾಯಿತು. ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟ ದಂತ ವೈದ್ಯ, ಲೇಖಕ ಡಾ|| ಮುರಲೀ ಮೋಹನ ಚೂಂತಾರು ಬರೆದಿರುವ ಸಂಜೀವಿನಿ ಭಾಗ-2 ಆರೋಗ್ಯ ಮಾರ್ಗದರ್ಶಿ ಕೃತಿಗೆ ವೈದ್ಯಕೀಯ ವಿಭಾಗದ ಶ್ರೇಷ್ಠ ಕೃತಿ ಪ್ರಶಸ್ತಿ ದೊರೆತಿದ್ದು, 25 ಸಾವಿರ ರೂ. ಹಾಗೂ ಪ್ರಶಸ್ತಿ ಫಲಕ ನೀಡಿ ಸನ್ಮಾನಿಸಲಾಯಿತು.


ವೈದ್ಯ ಸಾಹಿತಿ ಡಾ|| ರಣಜಿತ ಬೀರಣ್ಣ ನಾಯಕ ಅವರ ವೈದ್ಯ ವಿಜ್ಞಾನ ಕೃತಿಗೂ ಶ್ರೇಷ್ಠ ಪುಸ್ತಕ ಪ್ರಶಸ್ತಿ ದೊರೆತಿದೆ. ವಿಜ್ಞಾನ ವಿಭಾಗದಲ್ಲಿ ಡಾ|| ಟಿ.ಎಸ್. ಚನ್ನೇಶ್ ಅವರ ಅನುರಣನ ವಿಜ್ಞಾನ ಪ್ರಬಂಧಗಳು, ತಂತ್ರಜ್ಞಾನ ವಿಭಾಗದಲ್ಲಿ ಡಾ|| ಟಿ.ಎಸ್. ಚನ್ನೇಶ್ ಅವರ ಅನುರಣನ ವಿಜ್ಞಾನ ಪ್ರಬಂಧಗಳು, ತಂತ್ರಜ್ಞಾನ ವಿಭಾಗದಲ್ಲಿ ಡಾ|| ಉದಯ ಶಂಕರ ಪುರಾಣಿಕ್ ಅವರ ಆರ್ಟಿಫಿಶಿಯಲ್ ಇಂಟಿಲಿಜೆನ್ಸ್ ಹೊಸ ತಂತ್ರಜ್ಞಾನ ಅವಕಾಶಗಳು ಮತ್ತು ಪ್ರೊ. ಮಹದೇವಯ್ಯ ಅವರ ವೃತ್ತಿಪರ ಕಂಪ್ಯೂಟರ್ ಸಾಕ್ಷರತೆ ಹಾಗೂ ಕೃತಿ ವಿಭಾಗದಲ್ಲಿ ತ್ರಿವೇಣಿ ಸಿ. ಅವರ ಮಣ್ಣು ಉಸಿರಾಡುವ ಜೀವ ವಸ್ತು ಎಂಬ ಕೃತಿಗಳಿಗೆ ಶ್ರೇಷ್ಠ ಪುಸ್ತಕ ಪ್ರಶಸ್ತಿ ನೀಡಲಾಗಿದೆ.

Also Read  ಹಾಸನಾಂಬೆಗೆ ಖಡ್ಗಮಾಲಾ ಸ್ತೋತ್ರ ಅರ್ಚನೆ ಮಾಡಿಸಿದ ಸಿಎಂ

error: Content is protected !!
Scroll to Top