SDPI ಪುಂಜಾಲಕಟ್ಟೆ ವತಿಯಿಂದ ಆಯುಷ್ಮಾನ್ ನೊಂದಣಿ ಮತ್ತು ಮತದಾರರ ಪಟ್ಟಿ ಸೇರ್ಪಡೆ, ತಿದ್ದುಪಡಿ ಹಾಗೂ ವರ್ಗಾವಣೆ ಅಭಿಯಾನ

(ನ್ಯೂಸ್ ಕಡಬ) newskadaba.com ಪುಂಜಾಲಕಟ್ಟೆ, ಆ. 27. ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪುಂಜಾಲಕಟ್ಟೆ ಇದರ ವತಿಯಿಂದ ಕೇಂದ್ರ ಸರಕಾರದ ಆರೋಗ್ಯ ಯೋಜನೆಯ “ಆಯುಷ್ಮಾನ್ ಭಾರತ್” ನೊಂದಾವಣಿ ಮತ್ತು ಮತದಾರರ ಪಟ್ಟಿ ಸೇರ್ಪಡೆ, ತಿದ್ಧುಪಡಿ ಹಾಗೂ ವರ್ಗಾವಣೆ ಅಭಿಯಾನ ಕಾರ್ಯಕ್ರಮವು ಪುಂಜಾಲಕಟ್ಟೆ ಕೇಂದ್ರ ಜುಮಾ ಮಸೀದಿಯ ಎದುರುಗಡೆ ನಡೆಯಿತು.

ಕಾರ್ಯಕ್ರಮವನ್ನು ಬದ್ರಿಯಾ ಜುಮಾ ಮಸೀದಿ ಉಸ್ತಾದ್ ಬಹು| ಅಬ್ದುಲ್ ರಹ್ಮಾನ್ ಅರ್ಶದಿ ದುವಾದೊಂದಿಗೆ ಚಾಲನೆ ನೀಡಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರ ಸಮಿತಿ ಸದಸ್ಯ ನಿಝಾಮುದ್ದೀನ್ ಗೇರುಕಟ್ಟೆ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಎಸ್.ಡಿ.ಪಿ.ಐ ಕುಕ್ಕಳ ಬ್ರಾಂಚ್ ಅಧ್ಯಕ್ಷರಾದ ಶಮೀರ್ ಪುಂಜಾಲಕಟ್ಟೆ, ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷರಾದ ಯೂಸುಫ್ ಹಾಜಿ, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಮಡಂತ್ಯಾರ್ ಡಿವಿಜನ್ ಅಧ್ಯಕ್ಷ ರಝಾಕ್ ಬಿ.ಎಮ್, ರಹ್ಮಾನಿಯ ಮಸೀದಿ ಪುಂಜಾಲಕಟ್ಟೆ ಇದರ ಕಾರ್ಯದರ್ಶಿ ಮುಹಮ್ಮದ್ ಅಬ್ಬೊನು, ಎಸ್.ಡಿ.ಪಿ.ಐ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರ ಸದಸ್ಯ ಹನೀಫ್ ಪುಂಜಾಲಕಟ್ಟೆ ಹಾಗೂ ಬಿ.ಜೆ.ಎಮ್ ಮಸೀದಿ ಕಾರ್ಯದರ್ಶಿ ಉಸ್ಮಾನ್ ಪಿ.ಎಚ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸುಮಾರು 384 ಮಂದಿ ಪ್ರಯೋಜನ ಪಡೆದುಕೊಂಡರು.

Also Read  ಗೃಹಲಕ್ಷ್ಮೀ ಯೋಜನೆಗೆ ಆ. 30ರಂದು ಮೈಸೂರಿನಲ್ಲಿ ಚಾಲನೆ - ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

error: Content is protected !!
Scroll to Top