ಬೆಳ್ತಂಗಡಿ :ನಾಪತ್ತೆಯಾಗಿದ್ದ ಯುವಕ ಕೆರೆಯಲ್ಲಿ ಶವವಾಗಿ ಪತ್ತೆ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ. ಆ,28: ಖಾಸಗಿ ಸಂಸ್ಥೆಯಲ್ಲಿ ಮ್ಯಾನೇಜರ್ ಆಗಿ ಚನ್ನರಾಯಪಟ್ಟಣದಲ್ಲಿ 9 ದಿನಗಳ ಹಿಂದೆಯಷ್ಟೇ ಕೆಲಸಕ್ಕೆ ಸೇರಿದ್ದು ಬಳಿಕ, ಏಕಾಏಕಿಯಾಗಿ ನಾಪತ್ತೆಯಾದ ಯುವಕನ ಶವ ಇಂದು ತನ್ನ ಮನೆಯ ಸಮೀಪದ ಕೆರೆಯಲ್ಲಿ ಪತ್ತೆಯಾಗಿದೆ. ಮೃತ ಯುವಕನ್ನು ನಾವೂರು ನಾಗಜೆ ನಿವಾಸಿ ದಿ. ಶೀನಪ್ಪ ಗೌಡ ಎಂಬುವರ ಪುತ್ರ 28 ವರ್ಷದ ರಕ್ಷಿತ್ ಎಂದು ಗುರುತಿಸಲಾಗಿದೆ. ಕಳೆದ ಒಂಭತ್ತು ದಿನಗಳ ಹಿಂದೆ ಖಾಸಗಿ ಸಂಸ್ಥೆಯೊಂದರ ಕೃಷಿಯಂತ್ರಧಾರೆಯಲ್ಲಿ ಕೃಷಿ ಯಂತ್ರಧಾರಾ ಯೋಜನೆಯ ಮ್ಯಾನೇಜರ್ ಆಗಿ ಚನ್ನರಾಯಪಟ್ಟಣದಲ್ಲಿ ಉದ್ಯೋಗಕ್ಕೆ ಸೇರ್ಪಡೆಗೊಂಡಿದ್ದರು.

 

ಆ.22 ರಂದು ಮನೆಗೆ ಬಂದು ಆ.24 ರಂದು ಕೆಲಸಕ್ಕೆ ತೆರಳಿದ್ದರು. ಬಳಿಕ ಮೊಬೈಲ್ ಸಂಪರ್ಕಕ್ಕೆ ಸಿಗದಿದ್ದರಿಂದ ಅನುಮಾನ ವ್ಯಕ್ತವಾಗಿತ್ತು. ಮೃತರ ಬೈಕ್ ಕಾಡಿನ ಬಳಿ ಪತ್ತೆಯಾಗಿದೆ. ಮೃತ ದೇಹ ಕೆರೆಯಲ್ಲಿ ಪತ್ತೆಯಾಗಿದೆ, ಸಮೀಪದಲ್ಲಿಯೇ ವಿಷದ ಬಾಟಲಿ ಪತ್ತೆಯಾಗಿದೆ. ಈತನ ಸತತ ಹುಡುಕಾಟದ ಬಳಿಕ ಇಂದು (ಆ.28) ಮನೆಯ ಸಮೀಪದ ಕೆರೆಯಲ್ಲಿ ಮೃತದೇಹ ಪತ್ತೆಯಾಗಿದೆ. ಆತ್ಮಹತ್ಯೆ ಮಾಡಿರಬಹುದೋ ಅಥವಾ ವ್ಯವಸ್ಥಿತ ಕೊಲೆಯೋ ಎಂಬ ಬಗ್ಗೆ ತನಿಖೆ ಬಳಿಕ ತಿಳಿದು ಬರಬೇಕಿದೆ.  ಇನ್ನು ಈ ಕುರಿತು ಬೆಳ್ತಗಂಡಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ಬಾಹ್ಯಾಕಾಶ ಅನ್ವೇಷಣೆ -ಚಲನಚಿತ್ರ ಪ್ರದರ್ಶನ

 

error: Content is protected !!
Scroll to Top