ಯುವತಿಯರ ಪಿಜಿಯಿಂದ ಬಟ್ಟೆ ಕದಿಯುತ್ತಿದ್ದ ವಿಕೃತ ಕಾಮಿಗೆ ಹುಡುಗಿಯರಿಂದ ಧರ್ಮದೇಟು

(ನ್ಯೂಸ್ ಕಡಬ) newskadaba.com ಮಂಗಳೂರು. ಆ,27:  ಯುವತಿಯರ ಪಿಜಿಯಿಂದ ಬಟ್ಟೆ ಕದಿಯುತ್ತಿದ್ದ ವಿಕೃತ ಕಾಮಿಗೆ ಕೊನೆಗೆ ಹುಡುಗಿಯರೇ ಧರ್ಮದೇಟು ನೀಡಿದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಪೊಲೀಸ್ ರಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗದ ಹಿನ್ನಲೆ ಯುವತಿಯರೇ ವಿಕೃತ ಕಾಮಿಗೆ ಬುದ್ದಿ ಕಲಿಸಿದ್ದಾರೆ.

 

ಮಂಗಳೂರಿನ ಶರವು ಮಹಾಗಣಪತಿ ದೇವಸ್ಥಾನ ಬಳಿಯ ಲೇಡಿಸ್ ಪಿಜಿಗೆ ಕಳೆದ ನಾಲ್ಕೈದು ತಿಂಗಳುಗಳಿಂದ ವಿಕೃತ ಕಾಮಿಯೊಬ್ಬ ಬಂದು ಯುವತಿಯರ ಬಟ್ಟೆ ಕದಿಯುತ್ತಿದ್ದ. ಈ ಹಿಂದೆ ಎರಡು ಬಾರಿ ಈತನನ್ನು ಹಿಡಿದು ಪೊಲೀಸರ ವಶಕ್ಕೆ ಒಪ್ಪಿಸಲಾಗಿತ್ತು. ಆದರೆ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸದೆ ಮರುದಿನವೇ ಆತನನ್ನು ಬಿಟ್ಟು ಕಳುಹಿಸಿದ್ದರು ಎಂಬ ಆರೋಪ ಕೇಳಿಬಂದಿದೆ. ಇದೇ ಪಿಜಿ ಗೆ ಈತ ನಾಲ್ಕನೇ ಬಾರಿ ಬಂದು ಕದಿಯುತ್ತಿದ್ದಾಗ ಯುವತಿಯರೇ ಈತನನ್ನು ಹಿಡಿದಿದ್ದಾರೆ. ಬಳಿಕ ಸರಿಯಾಗಿ ಧರ್ಮದೇಟು ನೀಡಿದ್ದಾರೆ. ಗಾಯಗೊಂಡ ವಿಕೃತಕಾಮುಕನನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದಾರೆ.

Also Read  ಕರ್ನಾಟಕಕ್ಕೆ ನಿರಾಸೆ, ಫೈನಲ್‌ಗೆ ಸೌರಾಷ್ಟ್ರ!

 

error: Content is protected !!
Scroll to Top