ಯುವಕರ ನಡುವೆ ಮಾರಾಮಾರಿ ➤ ಇಬ್ಬರ ಕೊಲೆ

(ನ್ಯೂಸ್ ಕಡಬ) newskadaba.com ಹುಬ್ಬಳ್ಳಿ, ಆ. 27.  ನಗರದ ಗೋಪನಕೊಪ್ಪ ಎಂಬಲ್ಲಿ ಬಸ್ ನಿಲ್ದಾಣದ ಬಳಿ ಬುಧವಾರ ತಡರಾತ್ರಿ ಮಾರಕಾಸ್ತ್ರಗಳಿಂದ ಹೊಡೆದು ಇಬ್ಬರನ್ನು ಕೊಲೆಗೈಯ್ಯಲಾಗಿದೆ.

 

ಕೊಲೆಯಾದ ಯುವಕರನ್ನು ಮಂಜುನಾಥ ಕಬ್ಬಿನ ಹಾಗೂ ನಿಯಾಜ್ ಎಂದು ಗುರುತಿಸಲಾಗಿದೆ. ಹಳೆಯ‌ ವೈಷ್ಯಮದ ಹಿನ್ನೆಲೆಯಲ್ಲಿ ಹೊಡೆದಾಟ ನಡೆದಿದ್ದು, ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿರುವುದರಿಂದ ಇಬ್ಬರು ಮೃತಪಟ್ಟಿದ್ದಾರೆ. ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತ ಆರ್ ದಿಲೀಪ್ ಗುರುವಾರ ಬೆಳಿಗ್ಗೆ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ಸೆ. 26ರಂದು ಬೆಂಗಳೂರು ಬಂದ್ - ನಾಳೆ ಯಾವ ಸೇವೆ ಇರುತ್ತೆ, ಏನಿರಲ್ಲ ಎಂಬುದನ್ನುತಿಳಿಯಿರಿ

error: Content is protected !!
Scroll to Top