ಅಳಿಕೆ ಸತ್ಯಸಾಯಿ ಲೋಕ ಸೇವಾ ಟ್ರಸ್ಟ್ ನ ಅಧ್ಯಕ್ಷ ಗಂಗಾಧರ್ ಭಟ್ ನಿಧನ

(ನ್ಯೂಸ್ ಕಡಬ) newskadaba.com ಅಳಿಕೆ . ಆ,27:  ಅಳಿಕೆ ಶ್ರೀ ಸತ್ಯಸಾಯಿ ಲೋಕ ಸೇವಾ ಟ್ರಸ್ಟ್ ಅಧ್ಯಕ್ಷ ಯು. ಗಂಗಾಧರ ಭಟ್ (90) ಅಸೌಖ್ಯದಿಂದ ದೇರಳಕಟ್ಟೆ ಖಾಸಗಿ ಆಸ್ಪತ್ರೆಯಲ್ಲಿ ಇಂದು ಬೆಳಗ್ಗಿನ ಜಾವ ನಿಧನ ಹೊಂದಿದರು.

 

 

ಸತ್ಯಸಾಯಿ ಬಾಬಾ ಅವರ ಅನನ್ಯ ಭಕ್ತರಾಗಿದ್ದ ಅವರು ಮಡಿಯಾಲ ನಾರಾಯಣ ಭಟ್ ಅವರ ಜತೆಗೆ ಅಳಿಕೆ ಹಾಗೂ ಮುದ್ದೇನಹಳ್ಳಿ ವಿದ್ಯಾಸಂಸ್ಥೆ ಕಟ್ಟಿ ಬೆಳೆಸಿದ್ದರು. ತ್ಯಾಗ ಜೀವಿಯಾಗಿದ್ದ ಅವರು 1977ರಿಂದ ಇಲ್ಲಿಯ ತನಕ ಸುಮಾರು 43 ವರ್ಷಗಳ ಕಾಲ ಟ್ರಸ್ಟ್ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. ಇವರ ಅವಧಿಯಲ್ಲಿ ಅಳಿಕೆಗೆ ಎರಡು ಬಾರಿ ಸತ್ಯಸಾಯಿಬಾಬಾ ಆಗಮಿಸಿದ್ದರು. ಅಳಿಕೆ ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಕೈಜೋಡಿಸುತ್ತಿದ್ದ ಅವರು ಶೈಕ್ಷಣಿಕ, ಧಾರ್ಮಿಕ, ಸಾಮಾಜಿಕ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿದ್ದರು.ಇಂದು  ಮಧ್ಯಾಹ್ನ ಅಳಿಕೆ ಶ್ರೀ ಸತ್ಯಸಾಯಿ ಲೋಕ ಸೇವಾ ವಿದ್ಯಾಸಂಸ್ಥೆಗಳ ಆವರಣದಲ್ಲಿ ಅವರ ಅಂತಿಮ ಕ್ರಿಯೆಯ ವಿಧಿವಿಧಾನಗಳು ನಡೆಯಲಿವೆ.

Also Read  ಶಾಲೆಗೆಂದು ತೆರಳಿ ತಿಂಗಳ ಹಿಂದೆ ನಾಪತ್ತೆಯಾಗಿದ್ದ ಕಡಬದ ಬಾಲಕಿ ಪತ್ತೆ ➤ ತಮಿಳುನಾಡಿನಿಂದ ಕರೆತಂದ ಪೊಲೀಸರು

 

error: Content is protected !!
Scroll to Top