‘ಬಹು ಪತ್ನಿ ವಲ್ಲಭ’ ನಿಂದ ಪುತ್ರಿಯ ಮೇಲೆ ದೌರ್ಜನ್ಯ ➤ ಮಗಳ ಮೇಲೆ ಕಾಮದೃಷ್ಟಿ ಹರಿಸಿದ ಭೂಪ ಜೈಲು ಪಾಲು

(ನ್ಯೂಸ್ ಕಡಬ) newskadaba.com ಪುತ್ತೂರು. ಆ,27:  ಬಹು ಪತ್ನಿ ಪುರುಷನೋರ್ವ ತನ್ನ ಕಾಮದಾಹಕ್ಕೆ ಕೊನೆಗೆ ತನ್ನ ಪುತ್ರಿಯನ್ನ ಬಳಸಿಕೊಳ್ಳಲು ಮುಂದಾಗಿ ಇದೀಗಾ ಜೈಲಿನಲ್ಲಿ ಕಂಬಿ ಎನಿಸುತ್ತಿದ್ದಾನೆ. ತನ್ನ ಅಪ್ರಾಪ್ತೆ ಪುತ್ರಿಯ ಮೇಲೆ ತಂದೆ ಲೈಂಗಿಕ ದೌರ್ಜನ್ಯ ನಡೆಸಿದ್ದು, ಆತನ ವಿರುದ್ದ ಪತ್ನಿ ನೀಡಿದ ದೂರಿನ ಹಿನ್ನಲೆಯಲ್ಲಿ ಪುತ್ತೂರು ಮಹಿಳಾ ಠಾಣಾ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಆರೋಪಿಯೂ ಪಾಟ್ರಕೋಡಿ ಸಮೀಪದ ನಿವಾಸಿಯಾಗಿದ್ದು, ತನ್ನ ಕೊನೆಯ ಹೆಂಡತಿಯ ಅಪ್ರಾಪ್ತೆ ಪುತ್ರಿಗೆ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದ. ಆ.25ರಂದು ಪುತ್ರಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಬಂದ ಪತಿಯನ್ನು ತಡೆದ ನನಗೆ ಹಲ್ಲೆ ನಡೆಸಿರುವುದಾಗಿ., ಕೊನೆಯ ಪತ್ನಿ ಮಹಿಳಾ ಪೋಲಿಸ್ ಠಾಣೆಗೆ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ .  ಈ ಹಿನ್ನಲೆಯಲ್ಲಿ ಮಹಿಳಾ ಠಾಣಾ ಪೊಲೀಸರು ಆರೋಪಿ ವಿರುದ್ಧ ಸೆಕ್ಷನ್ 354(ಎ), 324, 506ಮತ್ತು ಕಲಂ 8 ಪೋಕ್ಸೋ ಕಾಯ್ದೆ 2012 ಪ್ರಕರಣ ದಾಖಲಿಸಿಕೊಂಡಿದ್ದು ಆ.26ರಂದು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

Also Read  ತೀರ್ವ ಜ್ವರದಿಂದ ಎಂಟು ತಿಂಗಳ ಮಗು ಮೃತ್ಯು ➤ ಪತಿ ವಿರುದ್ದ ದೂರು ದಾಖಲು 

 

 

error: Content is protected !!
Scroll to Top