ಬೆಳ್ತಂಗಡಿ : ತಂದೆಯನ್ನ ಹತ್ಯೆ ಮಾಡಿದ್ದ ಮಗ ಈಗ ಪೋಲಿಸರ ಅತಿಥಿ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ . ಆ,27:  ದಕ್ಷಿಣ ಕನ್ನಡವನ್ನು ಬೆಚ್ಚಿ ಬೀಳಿಸಿದ್ದ,  ಬೆಳ್ತಂಗಡಿಯ ನಗರದ ಕುತ್ಯಾರು ರಸ್ತೆ ನಿವಾಸಿ ಹಿರಿಯ ಕಾರು ಚಾಲಕ ವಾಸು ಸಪಲ್ಯ(66) ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಮಗ ದಯಾನಂದನ್ನು (32) ಪೊಲೀಸರು ಬುಧವಾರ ರಾತ್ರಿ ಮಂಗಳೂರು ಸ್ಟೇಟ್ ಬ್ಯಾಂಕ್ ಬಳಿ ವಶಕ್ಕೆ ಪಡೆದಿದ್ದಾರೆ. ಆ.24 ರಂದು ವಾಸು ಸಪಲ್ಯ ಅವರು ಬೆಳಗ್ಗೆ ವಾಕಿಂಗ್ ತೆರಳಿದ್ದಾಗ ತಲೆ ಹಾಗೂ ಕುತ್ತಿಗೆ ಭಾಗಕ್ಕೆ ಮಚ್ಚಿನಿಂದ ಕಡಿದು ಕೊಲೆಮಾಡಲಾಗಿತ್ತು.

ಕೃತ್ಯದ ಬಳಿಕ ಇವರ ಮೂರನೇ ಮಗ ದಯಾನಂದ ನಾಪತ್ತೆಯಾಗಿದ್ದ ಕಾರಣ, ಆತನೇ ಕೊಲೆ ನಡೆಸಿರಬಹುದು ಎಂಬ ಅನುಮಾನ ಪೊಲೀಸರಿಗೆ ವ್ಯಕ್ತಪಡಿಸಿದ್ದರು ಮುಂಜಾನೆ ವಾಕಿಂಗ್ ಹೊರಟ ತಂದೆಯನ್ನೇ ನಡು ರಸ್ತೆಯಲ್ಲಿ ಮಾರಾಕಾಸ್ತ್ರಗಳಿಂದ ಕೊಲೆ ಮಾಡಿದ ಬಳಿಕ ದಯಾನಂದ ಮಂಗಳೂರಿನಲ್ಲಿ ಕದ್ರಿ ಕಂಬ್ಳದ ಬಳಿ ಟ್ಯಾಕ್ಸಿ ಚಾಲಕನಾಗಿ ಕೆಲಸಕ್ಕೆ ಸೇರಿದ್ದ. ಈ ಕುರಿತು ಮಾಹಿತಿ ಕಲೆಹಾಕಿದ ತನಿಖಾಧಿಕಾರಿ ಬೆಳ್ತಂಗಡಿ ವೃತ್ತನಿರೀಕ್ಷಕ ಸಂದೇಶ್ ಪಿ.ಜಿ. ಅವರ ತಂಡ ಎರಡು ದಿನಗಳ ನಿರಂತರ ಹುಡುಕಾಟದ ಬಳಿಕ ಆ.26 ರಂದು ರಾತ್ರಿ ಸ್ಟೇಟ್ ಬ್ಯಾಂಕ್ ಬಳಿ ವಶಕ್ಕೆ ಪಡೆದು ಕರೆತಂದಿದ್ದಾರೆ.

Also Read  ಚಾಲಕನ ನಿಯಂತ್ರಣತಪ್ಪಿ ಕಾರು ಪಲ್ಟಿ➤ತನಿಕೆ ವೇಳೆ ಅಕ್ರಮ ಗೋ ಸಾಗಾಟ ಪತ್ತೆ

 

“ತಂದೆ ತನ್ನನ್ನು ಬೈದಿರುವುದಕ್ಕೆ ಕೊಲೆ ನಡೆಸಿರುವುದಾಗಿ”ಎಂಬುದಾಗಿ ದಯಾನಂದ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪ್ರಾಥಮಿಕ ಮಾಹಿತಿಗಳಿಂದ ತಿಳಿದುಬಂದಿದೆ. ಸದ್ಯ ಮೃತ ವಾಸು ಸಫಲ್ಯ ರ ಮೂರನೇ ಪುತ್ರ ದಯಾನಂದ ಪೋಲಿಸರ ಅತಿಥಿಯಾಗಿದ್ದಾನೆ ಆರೋಪಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ಹೆಚ್ಚಿನ ವಿಚಾರಣೆಯನ್ನು ನಡೆಸುತ್ತಿದ್ದಾರೆ.

error: Content is protected !!
Scroll to Top