ದ್ವಿ ಚಕ್ರ ವಾಹನಕ್ಕೆ ಅಡ್ಡಬಂದ ಮಂಗ ➤ಸ್ಕೂಟರ್‌ ಸವಾರೆಗೆ ಗಾಯ



(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಆ.27: ಉಪ್ಪಿನಂಗಡಿ ಸಮೀಪದ ಕರಾಯ ಗ್ರಾಮದ ಗರಡಿ ಎಂಬಲ್ಲಿ ದ್ವಿ ಚಕ್ರ ಸವಾರಿಯ ವೇಳೆ ಮಂಗವೊಂದು ಅಡ್ಡ ಬಂದ ಪರಿಣಾಮ ದ್ವಿ ಚಕ್ರ ಸವಾರೆ ಶ್ರೀಮತಿ ಪೂರ್ಣಿಮ (34) ಎಂಬವರು ಗಂಭೀರವಾಗಿ ಗಾಯಗೊಂಡ ಘಟನೆ ಬುಧವಾರ ಸಂಭವಿಸಿದೆ.





ಪುತ್ತೂರಿನಿಂದ ಮಂಗಳೂರಿನತ್ತ ತನ್ನ ಹೊಂಡಾ ಆಕ್ಟೀವಾ ದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಮಂಗವೊಂದು ರಸ್ತೆಯಲ್ಲಿ ದಿಢೀರ್‌ ಆಗಿ ಅಡ್ಡ ಬಂದಾಗ ನಿಯಂತ್ರಣ ಕಳೆದುಕೊಂಡ ಆಕ್ಟೀವಾದಿಂದ ಪೂರ್ಣಿಮರವರು ರಸ್ತೆಗೆ ಬಿದ್ದಿದ್ದರು. ಈ ಪರಿಣಾಮ ಗಂಭೀರವಾಗಿ ಗಾಯಗೊಂಡು ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪುತ್ತೂರು ಟ್ರಾಫಿಕ್‌ ಪೊಲೀಸ್‌ ಠಾಣೆಗೆ ಮಾಹಿತಿಯನ್ನು ನೀಡಲಾಗಿದೆ.






 

error: Content is protected !!
Scroll to Top