ಮರವಂತೆಯಲ್ಲಿ ಆಲೆಗಳ ಹೊಡೆತಕ್ಕೆ ದೋಣಿ ಪಲ್ಟಿ ➤ ಪ್ರಾಣಾಪಾಯದಿಂದ ಪಾರಾದ ಮೀನುಗಾರರು

(ನ್ಯೂಸ್ ಕಡಬ) newskadaba.com ಉಡುಪಿ. ಆ,26:  ಉಡುಪಿಯಲ್ಲಿ ಇತ್ತೀಚೆಗೆ ಮೀನುಗಾರ ಸಮುದಾಯಕ್ಕೆ ಸರಣೆ ಮೀನುಗಾರಿಕಾ ದೋಣಿಗಳ ದುರಂತ ಆಘಾತವನ್ನು ಉಂಟು ಮಾಡಿದೆ. ಇಂದು ಕೂಡ ಬೈಂದೂರು ತಾಲೂಕು ಮರವಂತೆಯಲ್ಲಿ ಮೀನುಗಾರಿಕೆ ವೇಳೆ ಡಿಂಗಿ ದೋಣಿ ಪಲ್ಟಿಯಾದ ದುರಂತ ಸಂಭವಿಸಿದೆ. ಮರವಂತೆಯಲ್ಲಿ ಮೀನುಗಾರಿಕೆ ನಿರತವಾಗಿದ್ದ ಸಂದರ್ಭ ದೊಡ್ಡ ತೆರೆಯ ರಭಸಕ್ಕೆ ದೋಣಿ ಮಗುಚಿರುವ ಘಟನೆ ನಡೆದಿದ್ದು, ದೋಣಿ ಮಾಲೀಕರಿಗೆ ಗಂಭೀರ ಗಾಯಗಳಾಗಿದೆ.

 

ಗಂಗೊಳ್ಳಿ ಬಂದರಿನ ಶ್ರೀನಿವಾಸ ಕಾರ್ವಿ ಎಂಬವರ ಮಾಲೀಕತ್ವದ ಆದಿ ಆಂಜನೇಯ ದೋಣಿ ಇಂದು ತ್ರಾಸಿ ಮರವಂತೆ ಸಮೀಪ ಮೀನುಗಾರಿಕೆಗೆ ತೊಡಗಿದ್ದ ಸಂದರ್ಭ ದೊಡ್ಡ ತೆರೆಯ ರಭಸಕ್ಕೆ ದೋಣಿ ದಿಬ್ಬಕ್ಕೆ ಹೊಡೆದು ಮಗುಚಿದೆ. ಅದೃಷ್ಟವಶಾತ್ ಮೀನುಗಾರರು ಸಮುದ್ರದಲ್ಲಿ ಈಜಿ ತಮ್ಮ ಪ್ರಾಣ ರಕ್ಷಣೆ ಮಾಡಿಕೊಂಡಿದ್ದಾರೆ. ದೋಣಿಯನ್ನು ಮೇಲೆತ್ತುವ ಸಂದರ್ಭ ದೋಣಿ ಮಾಲಿಕರಾದ ಶ್ರೀನಿವಾಸ ಖಾರ್ವಿ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಅವರು ಕುಂದಾಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Also Read  ಯುವ ಯಕ್ಷಗಾನ ವೇಷಧಾರಿ ರಾಜೇಂದ್ರ ಗಾಣಿಗ ವಿಧಿವಶ

 

error: Content is protected !!
Scroll to Top