ಹುಟ್ಟಿದ 3 ಗಂಟೆಯಲ್ಲೇ ಕೊರೊನಾಗೆ ಬಲಿಯಾದ ನವಜಾತ ಶಿಶು…!

(ನ್ಯೂಸ್ ಕಡಬ) newskadaba.com ಬೆಂಗಳೂರು, ಆ.26:  ಜನಿಸಿದ ಮೂರು ಗಂಟೆಯಲ್ಲೇ ಕೊರೊನಾ ಸೋಂಕಿನಿಂದ ನವಜಾತ ಶಿಶು ಸಾವನ್ನಪ್ಪಿದ ಕರುಣಾಜನಕ ಘಟನೆ ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನಡೆದಿದೆ. ದೊಡ್ಡಬಳ್ಳಾಪುರ ಮೂಲದ ದಂಪತಿಗೆ ಕೊರೊನಾ ಪಾಸಿಟಿವ್ ಇತ್ತು. ಈ ನಡುವೆ ಈ ದಂಪತಿಗೆ ಜನಿಸಿದ ಮಗುವಿಗೂ ಕೊರೊನಾ ಸೋಂಕು ತಗುಲಿದ್ದು ಜನಿಸಿದ 3 ಗಂಟೆಯಲ್ಲೇ ಪ್ರಾಣ ಬಿಟ್ಟಿದ್ದು ಕಣ್ಣು ಬಿಟ್ಟು ನೋಡುವುದರೊಳಗಾಗಿ ಕೊರೊನಾ ಬಲಿ ತೆಗೆದುಕೊಂಡಿತು.

ದುರಂತವೆಂದರೆ ಈ ಮಗುವನ್ನು ಪೋಷಕರು, ಸಂಬಂಧಿಕರು ಯಾರೂ ನೋಡಲಾಗಲಿಲ್ಲ, ಅಂತ್ಯಸಂಸ್ಕಾರವನ್ನೂ ಮಾಡಲಾಗಲಿಲ್ಲ. ಚಾಮರಾಜಪೇಟೆಯ ಶಾಸಕ ಜಮೀರ್ ಅವರ ತಂಡ ಹಿಂದೂ ಸಂಪ್ರದಾಯದಂತೆ ಈ ಮಗುವಿನ ಅಂತ್ಯಕ್ರಿಯೆ ನೆರವೇರಿಸಿದರು.ಆಂಬುಲೆನ್ಸ್‌ ನ ಸಿಬ್ಬಂದಿಗಳೇ ಮಗುವಿನ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡರು. ಹುಟ್ಟಿದ ಮೂರು ಗಂಟೆಯಲ್ಲೇ ಈ ಮಗು ಕೊರೊನಾಕ್ಕೆ ಬಲಿಯಾಗಿದ್ದು ಒಂದು ದುರಂತ.

Also Read  ಬಂಟ್ವಾಳ: ಹಾಡಹಗಲೇ ಮನೆಗೆ ನುಗ್ಗಿದ ಕಳ್ಳರು ➤ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು

 

error: Content is protected !!
Scroll to Top