ನಕ್ಷತ್ರ ಆಮೆ ಮಾರಾಟಟಕ್ಕೆ ಯತ್ನ ➤ ಪೋಲಿಸರ ಅತಿಥಿಯಾದ ಆರೋಪಿ

(ನ್ಯೂಸ್ ಕಡಬ) newskadaba.com ಮಡಿಕೇರಿ. ಆ,26:  ನಕ್ಷತ್ರ ಆಮೆ ಮಾರಾಟ ಮಾಡಿ ಲಕ್ಷಾಧಿಪತಿ ಆಗಲು ಯತ್ನಿಸಿದ ಕಿರಾತಕ ಈಗ ಪೋಲಿಸರ ಅತಿಥಿಯಾದ ಘಟನೆ ಮಡಿಕೇರಿಯಲ್ಲಿ ನಡೆದಿದೆ. ಆಮೆಗಳ ಮಾರಾಟಕ್ಕೆ ಯತ್ನಿಸುತ್ತಿರುವ ಬಗ್ಗೆ ಮಾಲಗಳಿಂದ ಸಿಕ್ಕಿದ ಖಚಿತ ಮಾಹಿತಿ ಮೇರೆಗೆ, ಮಡಿಕೇರಿ ಅರಣ್ಯ ಸಂಚಾರಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.

ನಕ್ಷತ್ರ ಆಮೆ ಬಹಳ ಅಪರೂಪವಾಗಿ ಕಂಡು ಬರುವ ಇನ್ನೊಂದು ಆಮೆಯನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಯನ್ನು ಬಂಧಿಸಿ ವನ್ಯ ಜೀವಿ ಸಂರಕ್ಷಣಾ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಆರೋಪಿ ಹಮೀದ್ ನನ್ನು ಮಡಿಕೇರಿ ತಾಲೂಕಿನ ಎಮ್ ಬಾಡಗ ಗ್ರಾಮದಿಂದ ಬಂದಿಸಿರುವ ಅರಣ್ಯ ಪೋಲಿಸರು ಆಮೆಗಳನ್ನು ವಶಕ್ಕೆ ಪಡೆದಿದ್ದಾರೆ.

Also Read  2,000.ರೂ ನೋಟು ಬದಲಾವಣೆ ಪ್ರಕ್ರಿಯೆ ಆರಂಭ➤ಮೊದಲ ದಿನವೇ ದೇಶದ ಹಲವೆಡೆ ಗೊಂದಲ

 

error: Content is protected !!
Scroll to Top