ಸ್ನಾನಕ್ಕಿಳಿದು ನೀರು ಪಾಲಾದ ಯುವಕನ ಮೃತ ದೇಹ ಪತ್ತೆ

ಸ್ನಾನ ಮಾಡುತ್ತಿದ್ದಾಗ ಹೊಳೆ ಪಾಲಾಗಿ ಮಂಗಳೂರು ನಿವಾಸಿಯೋರ್ವ ಮೃತಪಟ್ಟ ಘಟನೆ ಮಧೂರು ಬಳಿ ನಡೆದಿದೆ. ಮೃತಪಟ್ಟವರನ್ನು ಮಂಗಳೂರು ಎಕ್ಕೂರಿನ ವಿನೋದ್ ( 35 ) ಎಂದು ಗುರುತಿಸಲಾಗಿದೆ.ಆದಿತ್ಯವಾರ ಸಂಜೆ ಘಟನೆ ನಡೆದಿತ್ತು.

 

 

ಮಧೂರಿನ ತೋಟವೊಂದರಲ್ಲಿ ಕೆಲಸ ನಿರ್ವಹಿಸಿ ಮಧೂರು ಸೇತುವೆ ಬಳಿಯ ಹೊಳೆ ಯಲ್ಲಿ ಸ್ನಾನಕ್ಕಿಳಿದ ಸಂದರ್ಭದಲ್ಲಿ ಕೊಚ್ಚಿಕೊಂಡು ಹೋಗಿದ್ದು, ಇದನ್ನು ಗಮನಿಸಿದ ಪ್ರತ್ಯಕ್ಷದರ್ಶಿಗಳು ಪೊಲೀಸ್, ಅಗ್ನಿಶಾಮಕ ದಳದ ಸಿಬಂದಿಗಳಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿ ಶೋಧ ನಡೆಸಿದರೂ ಪತ್ತೆ ಹಚ್ಚಲು ಸಾಧ್ಯವಾಗಲಿಲ್ಲ. ಎರಡು ದಿನಗಳ ಬಳಿಕ ಮಧೂರು ಹೊಳೆ ಬದಿಯಿಂದ ಮೃತದೇಹ ಪತ್ತೆಯಾಗಿದೆ.ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯ ಶವಗಾರದಲ್ಲಿರಿಸಲಾಗಿದ್ದು, ಕೋವಿಡ್ ತಪಾಸಣಾ ವರದಿ ಬಳಿಕ ಮರಣೋತ್ತರ ಪರೀಕ್ಷೆ ನಡೆಸಲಿದೆ.

Also Read  'ರೆಪೊ ದರ'ದಲ್ಲಿ ಬದಲಾವಣೆ ಇಲ್ಲ RBI ಗವರ್ನರ್

 

error: Content is protected !!
Scroll to Top