(ನ್ಯೂಸ್ ಕಡಬ) newskadaba.com ಹಾಸನ. ಆ,26: ಆಶ್ರಯವಿಲ್ಲದ ಆಕೆ ಹಾಸನದ ಬಿಎಂ ರಸ್ತೆಯ ಪಕ್ಕದಲ್ಲೇ ಇದ್ದ ಅಂಗಡಿಯೊಂದರ ಮುಂದೆ ಅನಾಥವಾಗಿ ಮಲಗಿದ್ದಳು. ಹೀಗೆ ಅನಾಥವಾಗಿ ಮಲಗಿದ್ದವಳ ಮೇಲೆ ಕಾಮುಕನ ಕಣ್ಣು ಬಿದ್ದಿತ್ತು. ಮೊದಲು ಆಕೆಯನ್ನು ಅತ್ಯಾಚಾರ ಮಾಡಲು ಯತ್ನಿಸಿದ ಕಾಮುಕ ಆಕೆ ಒಪ್ಪದಿದ್ದಾಗ ಆಕೆಯ ತಲೆಯ ಮೇಲೆ ಕಲ್ಲು ಎತ್ತಿಹಾಕಿ ಸಾಯಿಸಿ ಸತ್ತವಳ ದೇಹದ ಮೇಲೆ ಮೃಗದ ರೀತಿ ಅತ್ಯಾಚಾರ ಎಸಗಿದ್ದಾನೆ. ಇಡೀ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಹಾಸನ ನಗರದ ಜನ ಬೆಚ್ಚಿಬಿದ್ದಿದ್ದಾರೆ.
ಸೋಮವಾರ ಹಾಸನ ಜಿಲ್ಲೆಯ ಬಿಎಂ ರಸ್ತೆಯಲ್ಲಿನ ಎನ್‍ಆರ್ ವೃತ್ತದ ಸಮೀಪವಿರುವ ಶ್ರೀ ಕನ್ನಿಕಾ ಪರಮೇಶ್ವರಿ ಸಹಕಾರಿ ಬ್ಯಾಂಕ್ ಎದುರು ರಾತ್ರಿ ರಸ್ತೆ ಪಕ್ಕದಲ್ಲಿ ಮಲಗಿದ್ದ ಮಹಿಳೆ ಮೇಲೆ ವ್ಯಕ್ತಿಯೋರ್ವ ತಲೆ ಮೇಲೆ ಕಲ್ಲು ಎತ್ತಿಹಾಕಿ ಆಕೆಯ ಶವದೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ್ದಾನೆ. ವಿಕೃತ ಕಾಮಿಯ ಪೈಶಾಚಿಕ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಮಹಿಳೆ ಮೇಲೆ ಕಲ್ಲು ಎತ್ತಿಹಾಕಿರುವ ವಿಕೃತಕಾಮಿ ಬಳಿಕ ಆಕೆಯ ಶವದ ಮೇಲೆ ಎರಗಿದ್ದಾನೆ. ಈ ವಿಡಿಯೋ ಇದೀಗ ವ್ಯಾಪಕ ವೈರಲ್ ಆಗುತ್ತಿದೆ.
ಸಿಸಿಟಿವಿ ವಿಡಿಯೋದಲ್ಲಿ ದಾಖಲಾಗಿರುವಂತೆ ಮೊದಲು ವಿಕೃತಕಾಮಿ ಆಕೆಯನ್ನು ಬಲವಂತೆ ಮಾಡಿದ್ದಾನೆ. ಇದಕ್ಕೆ ಮಹಿಳೆ ಒಪ್ಪದಿದ್ದಾಗ ಆಕೆ ಮಲಗಿದ ಬಳಿಕ ಆಕೆಯ ಮೇಲೆ ಸಿಮೆಂಟ್ ಇಟ್ಟಿಗೆ ಎತ್ತಿಹಾಕಿದ್ದಾನೆ. ಬಳಿಕ ರಕ್ತದ ಮಡುವಿನಲಿ ಬಿದ್ದು ಮೃತಪಟ್ಟ ಮಹಿಳೆಯ ಮೇಲೆ ಕಾಮುಕ ಅತ್ಯಾಚಾರ ಎಸಗಿ ಪರಾರಿಯಾಗಿದ್ದಾನೆ,ಪೊಲೀಸರು ಸಿಸಿ ಟಿವಿ ವಿಡಿಯೋ ಆಧರಿಸಿ ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ. ಹಾಸನ ನಗರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಮಹಿಳೆಯ ಗುರುತು ಇನ್ನೂ ಪತ್ತೆಯಾಗಿಲ್ಲ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.