ಬೆಳ್ತಂಗಡಿ: ಕೋಮು ಪ್ರಚೋದಕ ಪೋಸ್ಟ್ ಮಾಡಿದ್ದ ಆರೋಪಿಯ ಬಂಧನ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, . 25. ಕೋಮು ಪ್ರಚೋದನೆಯ ಪೋಸ್ಟ್‌ ಮಾಡಿದ ಆರೋಪದ ಪ್ರಕಾರ ಓರ್ವ ವ್ಯಕ್ತಿಯನ್ನು ಪೊಲೀಸರು ಆಗಸ್ಟ್ 24 ರ ಸೋಮವಾರದಂದು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಬಾರ್ಯ ಪುತ್ತಿಲ ಗ್ರಾಮದ ರಘುರಾಮು ಶೆಟ್ಟಿ ಎಂದು ತಿಳಿದಯ ಬಂದಿದೆ. ಆರೋಪಿಯು ಪುತ್ತಿಲದ ಸಂಬಂಧಿಕರೊಬ್ಬರ ನಿವಾಸದಲ್ಲಿ ಇರುವ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ಬೆಳ್ತಂಗಡಿ ಪೊಲೀಸ್ ಸರ್ಕಲ್ ಇನ್ಸ್‌ಪೆಕ್ಟರ್ ಸಂದೇಶ್ ಪಿ.ಜಿ ಅವರು ಇತರ ಪೊಲೀಸರೊಂದಿಗೆ ತೆರಳಿ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಆಗಸ್ಟ್ 5 ರಂದು ಅಯೋಧ್ಯೆಯಲ್ಲಿ ನಡೆದ ರಾಮ ಮಂದಿರ ಭೂಮಿ ಪೂಜೆಯ ಸಂದರ್ಭ ರಘುರಾಮನು ನೀತಿ ಸಂಹಿತೆಯನ್ನು ಉಲ್ಲಂಘನೆ ಮಾಡಿ, ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸಿದ್ದರು ಎಂದು ಆರೋಪಿಸಿ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಬಳಿಕ ಅವರು ವಾಟ್ಸಾಪ್‌ನಲ್ಲಿ “ನನಗೆ ಯಾರೂ ಏನು ಮಾಡಲು ಸಾಧ್ಯವಿಲ್ಲ. ಇನ್ನೊಂದು ಸಮುದಾಯದವರಿಗೆ ಬಾಂಬು ಹಾಕಿ ಕೊಲ್ಲಬೇಕು” ಎಂಬ ಕೋಮು ಪ್ರಚೋದಕ ಪೋಸ್ಟ್‌ ಮಾಡಿದ್ದರು.

Also Read  ಕಾಂಗ್ರೆಸ್‌ ಸೇರಿ ಯೋಗೇಶ್ವರ್ ರಾಜಕೀಯ ಭವಿಷ್ಯ ಹಾಳು ಮಾಡಿಕೊಂಡಿದ್ದಾರೆ- ಅಶೋಕ್ ವಾಗ್ದಾಳಿ

error: Content is protected !!
Scroll to Top