ಒತ್ತಾಯಪೂರ್ವಕವಾಗಿ ರ್ಯಾಪಿಡ್ ಟೆಸ್ಟ್ ನಡೆಸಬಾರದು ➤ ಬೆಳ್ಮಣ್ ಪೇಟೆಯಲ್ಲಿ ಆಕ್ರೋಶ ವ್ಯಕ್ತ

(ನ್ಯೂಸ್ ಕಡಬ) newskadaba.com ಬೆಳ್ಮಣ್. ಆ,25:  ಈಗಾಗಲೇ ಕೊರೊನಾದಿಂದ ಕಂಗೆಟ್ಟು ಹೋಗಿರುವ ಬೆಳ್ಮಣ್ ಗ್ರಾಮದ ಜನರನ್ನು ಯಾವುದೇ ಕಾರಣಕ್ಕೂ ಒತ್ತಾಯಪೂರ್ವಕವಾಗಿ ರ್ಯಾಪಿಡ್ ಟೆಸ್ಟ್ ನಡೆಸಬಾರದು ಈಗಾಗಲೇ ಬೆಳ್ಮಣ್ ಜನತೆ ಸೀಲ್‌ಡೌನ್ ಹಾಗೂ ರ‌್ಯಾಪಿಡ್ ಟೆಸ್ಟ್‌ಗಳಿಂದ ರೋಸಿ ಹೋಗಿದ್ದು ತೊಂದರೆ ಅನುಭವಿಸಿದ್ದಾರೆ. ರ‌್ಯಾಪಿಡ್ ಟೆಸ್ಟ್ ನಡೆಸುವುದಕ್ಕೆ ವಿರೋಧವಿದೆ ಎಂದು ಬೆಳ್ಮಣ್ ಪೇಟೆಯ ವರ್ತಕರು ಹಾಗೂ ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ ಘಟನೆ ಬೆಳ್ಮಣ್‌ನಲ್ಲಿ ನಡೆದಿದೆ.

ಬೆಳ್ಮಣ್‌ನ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂಭಾಗದಲ್ಲಿ ಜಮಾಯಿಸಿದ ಬೆಳ್ಮಣ್ ಪೇಟೆ ಪರಿಸರದ ವರ್ತಕರು ಹಾಗೂ ನಾಗರಿಕರು ರ‌್ಯಾಪಿಡ್ ಟೆಸ್ಟ್ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿ ವರ್ತಕರು ಬೆಳ್ಮಣ್ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಿಗೆ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಹಿತ ವಿವಿಧ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.

Also Read  ಸಿಎಂ ಭೇಟಿ ಮಾಡಿ ಅಳಲು ತೋಡಿಕೊಂಡ ಗುತ್ತಿಗೆದಾರರು

 

ಈಗಾಗಲೇ ಪೇಟೆ ಪರಿಸರದಲ್ಲಿ ಕೋವಿಡ್ ಪ್ರಕರಣ ಕಂಡು ಬಂದಿದ್ದು ಇಲ್ಲಿನ ಜನ ಸ್ವಯಂ ಕೊರೊನಾ ಟೆಸ್ಟ್ ಮಾಡಿಸಿದ್ದಾರೆ, ಸ್ವಯಂ ಸೀಲ್‌ಡೌನ್ ಮಾಡಿಸಿಕೊಂಡಿದ್ದಾರೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ. 5 ತಿಂಗಳುಗಳಿಂದ ಯಾವುದೇ ಕೆಲಸ, ವ್ಯವಹಾರಗಳಿಲ್ಲದೆ ಜನ ಅತಂತ್ರರಾಗಿದ್ದಾರೆ ಮತ್ತೆ ರ‌್ಯಾಪಿಡ್ ಟೆಸ್ಟ್‌ನ ಬಗ್ಗೆ ಸ್ಥಳೀಯಾಡಳಿತ ವರ್ತರನ್ನು ಹಾಗೂ ನಾಗರಿಕರಿಗೆ ಒತ್ತಾಯ ಹೇರಲಾಗುತ್ತಿದ್ದು ಈ ಕ್ರಮವನ್ನು ಕೂಡಲೇ ಕೈ ಬಿಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

Also Read  ಕಾರಿಗೆ ಲಾರಿ ಢಿಕ್ಕಿ ಹೊಡೆದು ಭೀಕರ ಅಪಘಾತ ➤ ಇಬ್ಬರು ಯುವಕರು ಮೃತ್ಯು

error: Content is protected !!
Scroll to Top