ರ‍್ಯಾಪರ್ ಚಂದನ್ ಶೆಟ್ಟಿಗೆ ಸಂಕಷ್ಟ ತಂದ ‘ಕೋಲು ಮಂಡೆ ಜಂಗಮ ದೇವರು” ಹಾಡು

(ನ್ಯೂಸ್ ಕಡಬ) newskadaba.com ಚಾಮರಾಜನಗರ. ಆ,25: ಜನಪದ ಹಾಡು ‘ಕೋಲು ಮಂಡೆ ಜಂಗಮ ದೇವರು” ಎಂಬ ಜನಪದ ರ್ಯಾಪ್ ಹಾಡಿಗೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಕನ್ನಡ ರ್ಯಾಪರ್, ಬಿಗ್ ಬಾಸ್ ವಿಜೇತ ಚಂದನ್ ಶೆಟ್ಟಿ ಜನತೆಯಲ್ಲಿ ಕ್ಷಮೆ ಕೋರಿದ್ದಾರೆ.

 

ಈ ಸಂಬಂಧ ವಿಡಿಯೋ ಮಾಡಿ ಸ್ಪಷ್ಟನೆ ನೀಡಿರುವ ಚಂದನ್ ಶೆಟ್ಟಿ, “ಯಾರ ಭಾವನೆಗಳಿಗೂ ಧಕ್ಕೆ ಉಂಟು ಮಾಡಲು ಈ ಹಾಡನ್ನು ಮಾಡಿಲ್ಲ. ಈಗಿನ ಪೀಳಿಗೆಗೆ ಜಾನಪದ ತಲುಪಲಿ ಎನ್ನುವ ಕಾರಣಕ್ಕೆ ರ್ಯಾಪ ಹಾಡಿನ ರೂಪ ಕೊಟ್ಟಿದ್ದೆ. ಇದರಿಂದ ಯಾರಿಗಾದರೂ ಬೇಸರವಾಗಿದ್ದರೆ ಕ್ಷಮೆ ಕೇಳುತ್ತೇನೆ” ಎಂದು ಹೇಳಿದ್ದಾರೆ.ವಿವಾದ ನಡುವೆ ಆಗಸ್ಟ್ 23 ರಂದು ಬಿಡುಗಡೆಯಾಗಿರುವ ಚಂದನ್ ರ ಕೋಲು ಮಂಡೆ ಜಂಗಮ ದೇವರು ರ್ಯಾಪ್ ಸಾಂಗ್, ಈಗಾಗಲೇ 35 ಲಕ್ಷಕ್ಕೂ ಅಧಿಕ ವ್ಯೂ ಕಂಡಿದೆ. ಯೂ ಟ್ಯೂಬ್ ನಲ್ಲಿ ನಂಬರ್ ಒನ್ ಟ್ರೆಂಡಿಂಗ್ ಆಗಿದೆ.ಚಂದನ್ ಶೆಟ್ಟಿ ವಿರುದ್ಧ ಮಾದಪ್ಪನ ಗೀತೆಯನ್ನು ಅಶ್ಲೀಲವಾಗಿ ತೋರಿಸಿರುವ ಆರೋಪ ಕೇಳಿಬಂದಿದೆ. ಚಂದನ್ ತಮ್ಮ ಸಾಂಗ್ ನಲ್ಲಿ ಶಿವಶರಣೆ ಸಂಕಮ್ಮನ ಬಗ್ಗೆ ಅಶ್ಲೀಲ ಪ್ರದರ್ಶಿಸಲಾಗಿದೆ ಮತ್ತು ಭಕ್ತಿ ಗೀತೆಯನ್ನು ತಿರುಚಲಾಗಿದೆ. ಈ ಮೂಲಕ ಮಾದಪ್ಪನ ಭಕ್ತರ ಧಾರ್ಮಿಕ ಮನೋಭಾವನೆಗೆ ಧಕ್ಕೆ ತಂದಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಚಂದನ್ ಶೆಟ್ಟಿ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.

Also Read  ಕರಾವಳಿಯಲ್ಲಿ ಮುಂದುವರಿದ ವರುಣನ ರುಧ್ರನರ್ತನ➤ ಚಾರ್ಮಾಡಿ ತಪ್ಪಲಿನ ಗ್ರಾಮಗಳಲ್ಲಿ ನೆರೆ ಭೀತಿ

 

error: Content is protected !!
Scroll to Top