ಕರಾವಳಿಯಲ್ಲಿ ಮತ್ತೆ 201 ಕೊವೀಡ್-19 ಪ್ರಕರಣ ಪತ್ತೆ ➤ ಆರು ಮಂದಿ ಮೃತ್ಯು

(ನ್ಯೂಸ್ ಕಡಬ) newskadaba.com ಕರಾವಳಿ . ಆ,25:  ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಮವಾರ 201 ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, 6 ಮಂದಿ ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ ಮೃತರ ಒಟ್ಟು ಸಂಖ್ಯೆ ಸಂಖ್ಯೆ 316ಕ್ಕೆ ಹೆಚ್ಚಳವಾಗಿದೆ.

 

ಮೃತರಲ್ಲಿ 255 ಮಂದಿ ದಕ ಜಿಲ್ಲೆಯವರಾದರೆ, 61 ಮಂದಿ ಹೊರಜಿಲ್ಲೆಯವರು. ಸೋಮವಾರ ಮೃತಪಟ್ಟವರಲ್ಲಿ ಮಂಗಳೂರು ತಾಲೂಕಿನ ಮೂವರು, ಬಂಟ್ವಾಳದ ಇಬ್ಬರು ಮತ್ತು ಹೊರಜಿಲ್ಲೆಯ ಒಬ್ಬರು ಸೇರಿದ್ದಾರೆ.ಪಾಸಿಟಿವ್‌ ಆದವರಲ್ಲಿ ಮಂಗಳೂರು ತಾಲೂಕಿನ 144, ಬಂಟ್ವಾಳದ 22, ಪುತ್ತೂರಿನ 5, ಸುಳ್ಯದ 5, ಬೆಳ್ತಂಗಡಿಯ 7 ಮತ್ತು ಇತರ ಜಿಲ್ಲೆಗಳ 18 ಮಂದಿ ಇದ್ದಾರೆ.ಒಟ್ಟು 7918 ಮಂದಿ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಗೊಂಡಂತಾಗಿದೆ. 2297 ಮಂದಿ ಸೋಂಕಿತರ ಚಿಕಿತ್ಸೆ ಮುಂದುವರಿದಿದೆ ಎಂದು ಜಿಲ್ಲಾಡಳಿತದ ವರದಿ ತಿಳಿಸಿದೆ.

Also Read  ಬಿಬಿಸಿ ಆದಾಯಕ್ಕೆ ತಕ್ಕ ತೆರಿಗೆ ಪಾವತಿಸಿಲ್ಲ ➤ ಆದಾಯ ತೆರಿಗೆ ಇಲಾಖೆ ಆರೋಪ

 

error: Content is protected !!
Scroll to Top