ಬಂಟ್ವಾಳ: ಅಂಗವೈಕಲ್ಯತೆಯನ್ನು ಮೆಟ್ಟಿನಿಂತು ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದಿದ್ದ ಕೌಶಿಕ್ಗೆ ಆಳ್ವಾಸ್ ಕಾಲೇಜಿನಲ್ಲಿ ಶಿಕ್ಷಣ

(ನ್ಯೂಸ್ ಕಡಬ) newskadaba.com ಬಂಟ್ವಾಳ, . 25. ಕಾಲು ಬೆರಳಿನ ಮೂಲಕ ಪರೀಕ್ಷೆ ಬರೆದು ರಾಜ್ಯದ ಜನತೆಯ ಗಮನ ಸೆಳೆದಿದ್ದ ಬಂಟ್ವಾಳ ಕಂಚಿಕಾರ ನಿವಾಸಿ ಕೌಶಿಕ್ ನ ವಿದ್ಯಾಭ್ಯಾಸ ಕ್ಕೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ನೀಡಿದ ಭರವಸೆಯಂತೆ ನೆರವಾಗಿದ್ದು, ಇದೀಗ ವಿದ್ಯಾರ್ಥಿಯನ್ನು ಮೂಡಬಿದಿರೆಯ ಆಳ್ವಾಸ್ ಪದವಿ ಪೂರ್ವ ಕಾಲೇಜಿಗೆ ಸೇರ್ಪಡೆ ಮಾಡಲಾಗಿದೆ.

ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಆಧ್ಯಕ್ಷ ಡಾ. ಮೋಹನ್ ಆಳ್ವ ಅವರ ಜೊತೆ ಮಾತನಾಡಿ ಶಾಸಕರು ದಾಖಲಾತಿಗೆ ಕ್ರಮ ಕೈಗೊಂಡಿದ್ದಾರೆ. ಶಾಸಕರ ಮಾತಿನಂತೆ ಮೋಹನ್ ಆಳ್ವ ಅವರು ಕೌಶಿಕ್ ಗೆ ಆಳ್ವಾಸ್ ಸಂಸ್ಥೆಯಲ್ಲಿ ವ್ಯವಸ್ಥೆ ಕಲ್ಪಿಸಿದ್ದಾರೆ. ಕೌಶಿಕ್ ನ ಆಸೆಯಂತೆ ಶಾಸಕರು ಮುತುವರ್ಜಿ ವಹಿಸಿ ಮೋಹನ್ ಆಳ್ವ ಅವರು ವಾಣಿಜ್ಯ ವಿಭಾಗದಲ್ಲಿ ಪಿ.ಯು‌.ಸಿ. ಶಿಕ್ಷಣಕ್ಕೆ ವ್ಯವಸ್ಥೆ ಕಲ್ಪಿಸಿದ್ದಾರೆ.

Also Read  ಮುಂಬೈ ಮಹಾಮಳೆ ►125 ವರ್ಷದ ಹಳೆಯ ಕಟ್ಟಡ ಕುಸಿದು 10 ಜನರ ಮೃತ್ಯು

error: Content is protected !!
Scroll to Top